ಇಲಿಗಳ ಕುಟುಂಬದ ಮೇಲೆ ಒಂದು ದಿನ ಐದಾರು ಬೆಕ್ಕುಗಳು ದಾಳಿ ಮಾಡಿದವು. ಎಲ್ಲಾ ಇಲಿಗಳೂ ಕಂಗಾಲಾಗಿ ಕೂಗತೊಡಗಿದವು. ಬಿಲದ ಒಳಗೆ ಮಲಗಿದ್ದ ಮುದಿ ಇಲಿಗೆ ಹೊರಗೆ ಏನಾಗುತ್ತಿದೆ ಎನ್ನುವುದು ಗೊತ್ತಾಯ್ತು. ಅದು ಗಂಟಲು ಸರಿಪಡಿಸಿಕೊಂಡು ಮಲಗಿದ್ದಲ್ಲಿಂದಲೇ ಕೂಗಿತು: 'ಬೌ...ಬೌ....ಬೌ'.
ನಾಯಿ ಬಂತೆಂದು ಹೆದರಿ ಎಲ್ಲಾ ಬೆಕ್ಕುಗಳು ಓಡಿಹೋದವು.
ಮರಿ ಇಲಿ: ಅಜ್ಜ, ಅದೇನು ಹಾಗೆ ಮಾಡಿದೆ?
ಮುದಿ ಇಲಿ: ಅದಕ್ಕೆ ಹೇಳೋದು ಪುಟ್ಟ, ಇನ್ನೊಂದು ಭಾಷೇನೂ ಕಲಿತಿರ್ಬೇಕು ಅಂತ!