ಒಂದು ದಿನ ಕೋಲ್ಯನ ಹೆಂಡತಿ ತಲೆ ತಿರುಗಿ ಬಿದ್ದುಬಿಟ್ಟಳು. ಕೋಲ್ಯ ಅವಳನ್ನೆತ್ತಿಕೊಂಡು ಆಸ್ಪತ್ರೆಗೆ ಓಡಿದ. ಸುಮಾರು ಹೊತ್ತು ಪರೀಕ್ಷಿಸಿದ ಡಾಕ್ಟರ್ ಆಕೆ ಸತ್ತುಹೋಗಿದ್ದಾಳೆಂದು ಹೇಳಿದರು. ಆಕೆಯನ್ನು ಕಟ್ಟಿಗೆಯ ಮೇಲೆ ಮಲಗಿಸಿ ಕೋಲ್ಯ ಅಳುತ್ತಲೇ ಬೆಂಕಿ ಕೊಟ್ಟ...
ಹೆಂಡತಿ(ಎದ್ದುಕುಳಿತು): ಅಯ್ಯೋ ನಾನು ಸತ್ತಿಲ್ಲ, ಬದುಕಿದೀನಿ ರೀ..
ಕೋಲ್ಯ(ಅಳುತ್ತಾ): ಡಾಕ್ಟರ್ಗಿಂತ ನಿನಗೇ ಹೆಚ್ಚು ಗೊತ್ತಾ, ಸುಮ್ನೆ ಬಿದ್ಕೊಳ್ಳೇ!!
----
ನ್ಯಾಯಾಧೀಶ: ನೀನು ಓವರ್ಸ್ಪೀಡ್ನಲ್ಲಿ ವಾಹನ ಚಲಾಯಿಸುತ್ತಿರಲಿಲ್ಲ ಎಂದು ಹೇಳುವುದಕ್ಕೆ ನಿನ್ನ ಬಳಿ ಆಧಾರವೇನಿದೆ?
ಆರೋಪಿ: ಸರ್, ನಾನು ನನ್ನ ಹೆಂಡತಿಯನ್ನು ಕರೆತರುವುದಕ್ಕೆ ಮಾವನ ಮನೆಗೆ ಹೋಗುತ್ತಿದ್ದೆ.
ನ್ಯಾಯಾಧೀಶ: ಹೆಂಡತಿ ಕರೆತರುವುದಕ್ಕೆ ಯಾವ ಗಂಡಸೂ ಅವಸರದಿಂದ ಧಾವಿಸಲಾರ. ಕೇಸ್ ಡಿಸ್ಮಿಸ್!