ಹುಡುಗ: ನೀನು ಇಂಗ್ಲಿಷ್ನಲ್ಲಿ ಫೇಲ್ ಆದೆ ಅಂತೆ, ನಿಜಾನಾ?
ಹುಡುಗಿ: Who TELLED you? It is unpossible..I sawed d result ystrdy. I Passed away
ಹುಡುಗ: ಅರ್ಥ ಆಯ್ತು ಬಿಡು!
***
ಟೀಚರ್: 'ಬೈಗುಳ'ದ ಅರ್ಥವೇನು?
ಕನ್ನಡಪ್ರೇಮಿ ಕೋಲ್ಯ: "ಅತ್ಯಧಿಕ ಕ್ರೋಧವುಂಟಾದಾಗ 'ಶಾರೀರಿಕ ರೂಪದಿಂದ ಹಿಂಸೆ ಮಾಡದೆ', ಮೌಖಿಕ ರೂಪದಿಂದ ಮಾಡಲ್ಪಡುವ ಹಿಂಸಾತ್ಮಕ ಕೆಲಸಕ್ಕೆ ಆಯ್ಕೆ ಮಾಡಿಕೊಂಡ 'ಶಬ್ದಗಳ ಸಮೂಹ'ವಿದು. ಈ ಪದಗಳನ್ನು ಉಚ್ಚರಿಸುವ ಮೂಲಕ ಮನಸ್ಸಿಗೆ ಅಸೀಮ ಶಾಂತಿಯ ಅನುಭವವಾಗುತ್ತದೆ".
ಟೀಚರ್(ಕಣ್ಣೊರಿಸಿಕೊಳ್ಳುತ್ತಾ): ತಪ್ಪಾಯ್ತು ಕ್ಷಮಿಸಿಬಿಡಪ್ಪ. ಇನ್ನೊಂದ್ಸಾರಿ ಅಪ್ಪಿತಪ್ಪಿ ಇಂಥ ಪ್ರಶ್ನೆ ಕೇಳೋದಿಲ್ಲ!