ಕಿರಿಕಿರಿಯ ಪರಮಾವಧಿ
ಹುಡುಗ: ಪೆನ್ಸಿಲ್ ಇದೇನಾ?
ಹುಡುಗಿ: ಇಲ್ಲ...
(ಸ್ವಲ್ಪ ಸಮಯದ ನಂತರ)
ಹುಡುಗ: ಪೆನ್ಸಿಲ್ ಇದೇನಾ?
ಹುಡಿಗ: ಇಲ್ಲ...
ಹುಡುಗ: ಪೆನ್ಸಿಲ್ ಇದೇನಾ ಪೆನ್ಸಿಲ್?
ಹುಡುಗಿ(ಅರಚಿ): ಇಲ್ಲ! ಇನ್ನೊಂದು ಸರ್ತಿ ಕೇಳಿದ್ರೆ. ಕಲ್ಲು ತೊಗೊಂಡು ಚಚ್ಚಿ ಬಿಡ್ತೀನಿ...
ಹುಡುಗ: ಕಲ್ಲು ಇದೇನಾ?
ಹುಡುಗಿ: ಇಲ್ಲ...
ಹುಡುಗ: ಓಹ್. ಹಾಗಿದ್ರೆ ಪೆನ್ಸಿಲ್ ಇದೇನಾ ಪೆನ್ಸಿಲ್?
---
ಮೈಗಳ್ಳ ಕೋಲ್ಯ: ಅಮ್ಮಾ ಒಂದು ಗ್ಲಾಸ್ ನೀರು ತಂದು ಕೊಡು...
ಅಮ್ಮ: ಕತ್ತೆ, ನೀರು ತಂದು ಕೊಡ್ಬೇಕಾ? ನಾನೇನು ನಿನ್ನ ಕೆಲಸದೌವ್ಳಾ? ಬಂದು ಕೆನ್ನೆಗೆ ಒಂದು ಏಟು ಕೊಡ್ತೀನಿ ನೋಡು...
ಮೈಗಳ್ಳ ಕೋಲ್ಯ: ಹೊಡಿಯೋದಕ್ಕೆ ಬರ್ತಿಯಲ್ಲ, ಹಾಗೆ ಒಂದು ಗ್ಲಾಸ್ ನೀರು ತಂದು ಕೊಡು!