ಲಕ್ಕೂರು ಎಂ. ನಾಗರಾಜ, ಮಾಲೂರು, 900538954
ಎಲ್ಲಾ ಗಂಡಸರು ಎಡ ಕೈಗೆ ತಮ್ಮ ಗಡಿಯಾರವನ್ನು ಕಟ್ಟುತ್ತಾರಲ್ಲಾ ಯಾಕೆ?
ಅವರೆಲ್ಲ ಎಡಪಂಥೀಯರು. ಅದಕ್ಕೇ ಹಾಗೆ ಎಂಬುದು ಸಿಪಿಐ ಪಕ್ಷದವರ ವಾದ!
ಮನು ವಿ. ದಾವಣಗೆರೆ, 9739259427
ಹುಡುಗಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೆ ಹುಡುಗರ ಗತಿ?
ಹುಡುಗರೇ ಗತಿ!
ಫ್ಯಾಷನ್ ಡಿಸೈನರ್ ಮಧು, 9945737427
ನಾನು ಬೆಳ್ಳಗೆ ಇದ್ದರೂ ನನ್ನನ್ನು ನೋಡಿದಾಗೆಲ್ಲ
ಅವಳು 'ಕರಿಯ ಐ ಲವ್ ಯೂ' ಅಂತಾಳಲ್ಲ?
ಬಣ್ಣಗುರುಡು ಇರಬೇಕು. ಅಡ್ಜಸ್ಟ್ ಮಾಡ್ಕೋ
ವಿ. ಹೇಮಂತಕುಮಾರ, ಬೆಂಗಳೂರು, 9035992900
ಚಿಕ್ಕಮಕ್ಕಳಿಗೆ ಬಾಲ್ಯದಲ್ಲಿಯೇ ಮುತ್ತು ಕೊಡಲು ಕಲಿಸುತ್ತಾರೆ ಏಕೆ ಭಟ್ರೇ?
ಭವಿಷ್ಯದಲ್ಲಿ ಸಹಾಯವಾಗಲಿ ಅಂತ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹುಡುಗಿಯರು ಮಿಡಿ ಹಾಕೋದು ಕಾಮಿಡಿಗೆ ಅನ್ಸುತ್ತಲ್ಲಾ?
ಹೌದೌದು 'ಕಾಮಿ'ಡಿಗೆ!
- ಬಾಣಭಟ್ಟ