ಮಾಗಡಿ ಶ್ರೀನಿವಾಸ್, ಮತ್ತಿಕೆರೆ, ರಾಮನಗರ, 9902797767
ಊರಿಗೆ ಬಂದವಳು ನೀರಿಗೆ ಬರುತ್ತಾಳಂತೆ- ನಿಜಾನಾ ಸಾರ್?
ನಲ್ಲೀಲಿ ನೀರು ಬಂದರೆ ಮಾತ್ರ!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
'ಸೊಂಟ' ಅಂದಾಕ್ಷಣ ಪಡ್ಡೆ ಹೈಕ್ಳ ಕಿವಿ ನಿಮಿರುತ್ತಲ್ಲ ಯಾಕೆ?
ಕಿವಿಯಷ್ಟೇ ನಿಮಿರುವುದು ಎಷ್ಟೋ ಒಳ್ಳೆಯದು!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಈಗೀಗ ಕೆಲವರು ದುಃಖಕ್ಕೂ ಕುಡೀತಾರೆ, ಸುಖಕ್ಕೂ ಕುಡೀತಾರಲ್ಲ?
ಇದ್ಯಾವ ಮಹಾ. ದೀಪಾವಳಿಗೆ ರಾಕೆಟ್ ಬಿಡೋಕೆ ಬಾಟ್ಲಿ ಇಲ್ಲ ಅಂತ ಕುಡಿಯೋರು ಇದಾರೆ!
ಕೆನ್ನಾಳು ಭಾಸ್ಕರ್, ಪಾಂಡವಪುರ 9036416729
ಸಾಹಿತಿಗೂ ಸಂಪಾದಕರಿಗೂ ಇರುವ ವ್ಯತ್ಯಾಸವೇನು?
ಹೆಚ್ಚಿನ ಸಾಹಿತಿಗಳು ಹಾಗೂ ಬಹುತೇಕ ಸಂಪಾದಕರು ಬರೆಯುವುದನ್ನು ನಿಲ್ಲಿಸಿರುವುದರಿಂದ ವ್ಯತ್ಯಾಸಕ್ಕಿಂತ ಸಾಮ್ಯತೆಯೇ ಹೆಚ್ಚು.
ಕಂಚಗನಹಳ್ಳಿ ಧನಂಜಯ, 9141308498
ರಾಜಕಾರಣಿಗಳ ಪಾದಯಾತ್ರೆಯ ಮೂಲ ಉದ್ದೇಶ?
ಅಧಿಕಾರ ಗದ್ದುಗೆಗೆ ಪ್ರಯಾಣ
- ಬಾಣಭಟ್ಟ