'ನಿನ್ನನ್ನೇ ವರಿಸ್ತೇನೆ' ಎಂದು ಸಾವಿರ ಸಾರಿ...

Updated on: 

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ 94491-30531
ಹಿಂದೆ ಹಿರಿಯರ ಮಾತನ್ನು ಕಿರಿಯರು ಕೇಳುತ್ತಿದ್ದರು. ಈಗ ಕಿರಿಯರ ಮಾತನ್ನು ಹಿರಿಯರು ಕೇಳುವಂತಾಗಿದೆಯಲ್ಲ ಯಾಕೆ?
ಅದೇ ಜನರೇಷನ್ ಗ್ಯಾಪ್!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
'ನಿನ್ನನ್ನೇ ವರಿಸ್ತೇನೆ' ಎಂದು ಸಾವಿರ ಸಾರಿ ಅಂದವಳು ಈಗ ಬೇರೆಯವನ ತೆಕ್ಕೆಯಲ್ಲಿ ಬಂಧಿಯಾಗಿ 'ಸ್ಸಾರಿ' ಅಂತಿದ್ದಾಳಲ್ಲಾ...?
ನಿನ್ನನ್ನೇ 'worry'ಸ್ತೇನೆ  ಅಂದಿದ್ದಿರಬೇಕು!

ಜೆ.ಪಿ. ನಾಗರಾಜ, ದಾವಣಗೆರೆ 99011 93811
ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು. ಬಡತನ ಬಂದಾಗ?
ನೀನು ದಾನ ಕೊಟ್ಟವನನ್ನು ಹುಡುಕಿಕೊಂಡು ಹೋಗು!

ಮಾಗಡಿ ಶ್ರೀನಿವಾಸ್, 9902 797767
ಕಾಗೇರಿಯವರ 'ಕನ್ನಡ ಅಭಿಮಾನ'ಕ್ಕೆ (ಕನ್ನಡದಲ್ಲಿ ವಿದ್ಯಾರ್ಥಿಗಳು ಸಹಿ ಮಾಡಬೇಕು) ಏನೆನ್ನುತ್ತೀರಿ?
ಅವರು ಹಾಗೇರಿ, ಸುಮ್ನೆ ಕಾಗೆ ಹಾರಿಸ್ತಾರೆ!

ರಾಜೂಗೌಡ 9844 777110
ವಕ್ರತುಂಡೋಕ್ತಿ ಓದಿದ ಆಂಟಿಯರು ನಕ್ಕು ನಲಿಯುವುದನ್ನು ಬಿಟ್ಟು ಸುಮ್ಮನೆ ವರಾತ ತೆಗೆಯುತ್ತಾರಲ್ಲ ಯಾಕೆ?
ಅವರು ಅದರಲ್ಲಿ 'ತುಂಟೋಕ್ತಿ' ಮಾತ್ರ ಹುಡುಕುತ್ತಾರೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com