ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವವರಿಗೆ ನಿಮ್ಮ ಕಿವಿಮಾತು?

Updated on: 

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಕೇಳುವಂಥವು 'ಬದುಕು ಬದಲಿಸೋ ಪ್ರಶ್ನೆಗಳು'. ಕೇಳ್ರಪ್ಪೋ ಕೇಳಿಯಲ್ಲಿ..?
ಮಾಮೂಲಿ ಬದುಕಿಗೆ ಕೊಂಚ ಕಚಗುಳಿ ಇಡುವ ಪ್ರಶ್ನೆಗಳು.

ವಿಷ್ಣುಶಂಕರ್, ಶಿವಮೊಗ್ಗ
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವವರಿಗೆ ನಿಮ್ಮ ಕಿವಿಮಾತು?
ಮಣ್ಣಾಗಿದ್ದರೂ ಪರವಾಗಿಲ್ಲ, ಡೆಟಾಲ್ ಸೋಪನ್ನೇ ಬಳಸಿ. ಇದು ಕೀಟಾಣುಗಳಿಂದ ಕೊಡುತ್ತೆ ಹಂಡ್ರೆಡ್ ಪರ್ಸೆಂಟ್ ಸುರಕ್ಷೆ!

ರಮೇಶ್ ಭಟ್ ಆವರ್ಸೆ, ಕುಂದಾಪುರ 9164276058
ಕಾಫಿ ಜತೆ ಹೆಂಡ್ತಿ ಸರೀನಾ ಅಥವಾ ಗರ್ಲ್‌ಫ್ರೆಂಡ್ ಸರೀನಾ?
ಕಾಫಿ ಜತೆ ಯಾರಾದ್ರೂ ಇದ್‌ಕೊಳ್ಳಲಿ, ನಿಮ್ ಜತೆ ಯಾರಿರಬೇಕು ಯೋಚ್ನೆ ಮಾಡಿ!

ಎಂ. ಬಿ. ಕೃಷ್ಣಮೂರ್ತಿ 9449130531
ತುಂಬುತೋಳಿನ ಶರ್ಟ್ ಹೊಲಿಸಿಕೊಂಡು ಅದನ್ನು ಅರ್ಧಕ್ಕೆ ಮಡಚುತ್ತಾರಲ್ಲಾ ಯಾಕೆ?
ತುಂಬುತೋಳು ಅವರ 'ಕೊಳ್ಳುವ' ಶಕ್ತಿಯನ್ನೂ ಅರ್ಧ ಮಡಚುವಿಕೆ ಅವರ 'ಇಕ್ಕುವ' ಶಕ್ತಿಯನ್ನೂ ಬಿಂಬಿಸುತ್ತದೆ, ಎಚ್ಚರ!

ರವಿಕುಮಾರ್ ಜಿ.ಬಿ. 9449669897
ಪ್ರೇಮಿಗಳು ಪಾರ್ಕ್ ಬದಲು ದೇವಸ್ಥಾನಗಳಲ್ಲಿ ಭೇಟಿ ಆಗುತ್ತಿದ್ದಾರೆ ಏಕೆ?
ದೇವಸ್ಥಾನದ ನೈತಿಕ ಪೊಲೀಸರೆಲ್ಲ ಪಾರ್ಕ್‌ಗಳಿಗೆ ಪಹರೆಗೆ ಹೋಗಿರುವುದು ಅವರಿಗೂ ಗೊತ್ತಾಗಿದೆ!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com