ಹರಳಹಳ್ಳಿ ಪುಟ್ಟರಾಜು, 9632838088
ಕೇಳ್ರಪ್ಪೋ ಕೇಳಿಗೆ ಉತ್ತರಿಸುವಾಗ ನಿಮ್ಮ ವಯಸ್ಸು ಎಷ್ಟಾಗಿರುತ್ತದೆ?
ಪ್ರಶ್ನೆ ತನ್ನಲ್ಲಿ ತುಂಬಿಕೊಂಡಿರುವ ಯೌವನವನ್ನು ಅದು ಅವಲಂಬಿಸಿರುತ್ತದೆ!
ಮಾಗಡಿ ಶ್ರೀನಿವಾಸ್, ರಾಮನಗರ
ಹೆಣ್ಣಿಗೆ ನಾಚಿಕೆಯೇ ಭೂಷಣ ಎನ್ನುತ್ತಾರೆ. ಇತ್ತೀಚೆಗೆ ಅದು ಕಡಿಮೆಯಾದಂತಿದೆಯಲ್ಲ?
ಭೂಷಣಗಳನ್ನೆಲ್ಲ ಕಳಚಿ ನಿರಾಡಂಬರವಾಗಿರುವ ಬಯಕೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕೆಲ ಹುಡ್ಗೀರು ತಮ್ಮ ಪ್ರಿಯಕರನನ್ನು ಹೊಗಳುವಾಗ 'ನೀನು 24 ಕ್ಯಾರೆಟ್ ಗೋಲ್ಡ್ ಇದ್ದಂಗೆ ಕಣೋ' ಎನ್ನುತ್ತಾರಲ್ಲ?
ಕಷ್ಟ ಕಾಲದಲ್ಲಿ ಅಡವಿಡಬಹುದು ಎಂಬ ದೂರಾಲೋಚನೆ!
ನೇರಲಗುಡ್ಡ ಶಿವಕುಮಾರ್, 9480343742
ಗಾಳಿ ಬೀಸುವುದಕ್ಕೂ ಗಾಳ ಹಾಕುವುದಕ್ಕೂ ಇರುವ ಸಾಮ್ಯತೆ ಏನು?
ಗಾಳ ಹಾಕಿದವರನ್ನು ಕೊನೆವರೆಗೂ ಉಳಿಸಿಕೊಳ್ಳಲು ಗಾಳಿ ಹಾಕುತ್ತಲೇ ಇರಬೇಕು.
ಜೆ. ಪಿ. ನಾಗರಾಜ, ದಾವಣಗೆರೆ 9901193811
ಹುಡುಗರು ಅತಿ ಆಡಿದರೆ 'ಹುಡುಗು ಬುದ್ಧಿ'. ಹುಡುಗಿಯರಾದರೆ?
ಅವರಿಗೂ ಬುದ್ಧಿಗೂ ತಳುಕು ಹಾಕುವ ಪ್ರಶ್ನೆಯೇ ಉದ್ಭವಿಸದು!
-ಬಾಣಭಟ್ಟ