ಓಂ ಚೆನ್ನೇಶ್, ಭದ್ರಾವತಿ, 9901257131
ಸಾರ್..ಚೋಲಿ ಕೆ ಪೀಚೆ ಕ್ಯಾ ಹೈ?
ಬುದ್ಧಿವಂತರು ಈ ಬಗ್ಗೆ ಪ್ರಶ್ನೆ ಕೇಳುವುದಿಲ್ಲ, ಅವರೇ ಅನ್ವೇಷಿಸಿ ತಿಳಿದುಕೊಳ್ಳುತ್ತಾರೆ!
ಪವನಕುಮಾರ್ ಕೆ. ವಿ. ಬಳ್ಳಾರಿ
ಪ್ರೇಮನಿವೇದನೆಗೆ ಕೆಂಗುಲಾಬಿಯನ್ನೇ ಉಡುಗೊರೆ ಕೊಡುತ್ತಾರೇಕೆ?
ಡೇಂಜರ್ ಇದೆ, ಆದರೂ ಹೂವಿಗೆ ಕೈಚಾಚಿ ಎಂಬುದರ ಸೂಚ್ಯಾರ್ಥ!
ಫ್ಯಾಷನ್ ಡಿಸೈನರ್ ಮಧು 9945737427
ಪ್ರೀತಿ ಯಾರ ಸ್ವತ್ತು? ಹೆಣ್ಣಿನದ್ದೋ ಗಂಡಿನದ್ದೋ?
ನಂದೂ ನಂದೂ ಎಂಬ ಹೊಡೆದಾಟದಲ್ಲೇ ಜೀವನದ ಥ್ರಿಲ್!
ಮಗ್ನಳ್ಳಿ ಗುರು, ಬನವಾಸಿ 9480931442
ಹುಡುಗರು ಹುಡುಗಿಯರ ಬೆನ್ನ ಹಿಂದೆ ಸುತ್ತುತ್ತಾರೆ. ಆದರೆ ಹುಡುಗಿಯರು ಹುಡುಗರ ಬೆನ್ನ ಹಿಂದೆ ಸುತ್ತುವುದು ಯಾವಾಗ?
ಅವರು ಕೇವಲ ಪ್ರತೀ ಯಶಸ್ವಿ ಪುರುಷನ ಬೆನ್ನ ಹಿಂದೆ ಮಾತ್ರ ಇರುತ್ತಾರೆ!
ಬರ್ಕ್ಲೀ ರಮೇಶ್, ಮಂಡ್ಯ 9008741348
ಬರ್ಕ್ಲಿ ಸಿಗರೇಟಿಗೂ ಕಿಂಗ್ ಸಿಗರೇಟಿಗೂ ಇರುವ ವ್ಯತ್ಯಾಸವೇನು?
ಎರಡೂ ಆಯಸ್ಸು- ಆರೋಗ್ಯ ಸುಡುವುದರಲ್ಲಿ ಕಿಂಗ್, ಬರ್ಕಳೀ!
- ಬಾಣಭಟ್ಟ