ಪ್ರಳಯದ ಗುಮ್ಮ ಈಗ ಎಲ್ಲಿ ಅಡಗಿರಬಹುದು?

Updated on: 

ಉಜ್ಜನಿ ಜಲೇಂದ್ರ 8971857200
ಪ್ರಳಯದ ಗುಮ್ಮ ಈಗ ಎಲ್ಲಿ ಅಡಗಿರಬಹುದು?
ತನ್ನಿಂದ ಸೃಷ್ಟಿಯಾದ ಬಿಸಿನೆಸ್ ಕಂಡು ಆ ಗುಮ್ಮವೇ ಮೂರ್ಛೆ ಹೋದಂತಿದೆ!

ರವಿಕುಮಾರ್ ಜಿ. ಬಿ. 9449669897
ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು 'ಆರೋಗ್ಯ ಶಿಬಿರ'ಗಳನ್ನು ಏರ್ಪಡಿಸುತ್ತಾರೆ ಏಕೆ?
ಇಷ್ಟು ವರ್ಷದಲ್ಲಿ ಜನರ ಆರೋಗ್ಯವನ್ನು ಯಾವ ಪರಿ ಹದಗೆಡಿಸಿದ್ದೇವೆ ಎಂಬ ನಿಖರ ಲೆಕ್ಕಾಚಾರ ಅವರಿಗಿರುತ್ತದೆ!

ನೇರಲಗುಡ್ಡ ಶಿವಕುಮಾರ್, ಶಿರಾ 9480343742
ಕನಿಷ್ಠ ಪ್ರಾಮಾಣಿಕ ಕಳಕಳಿಯ ಆಡಳಿತ ನೀಡುವಲ್ಲೂ ಬಿಜೆಪಿ ಎಡವಿತಂತೆ, ಹೌದೇ?
ಬಿಜೆಪಿ ಆಡಳಿತ ಕಂಡು ಕಳಕಳಿ, ಪ್ರಾಮಾಣಿಕತೆ ಪದಗಳೆಲ್ಲ ಶಬ್ದಕೋಶದಿಂದ ಎದ್ದು ಓಡಿ ಹೋಗಿವೆಯಂತೆ!

ವಿ. ಹೇಮಂತಕುಮಾರ, 9035992900
ಚೂಡಿದಾರ್ ಧರಿಸುವ ಹುಡುಗಿಯರು ಚೂಟಿಯಂತೆ ಹೌದಾ?
ಅಷ್ಟಾಗಿ ಏನನ್ನೂ ಧರಿಸುವುದಕ್ಕೆ ಇಷ್ಟಪಡದ ಹುಡುಗಿಯರನ್ನು ಏನಂತ ಕರೆಯೋದು?

ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಸತ್ಯವಂತರಿಗಿದು ಕಾಲವಲ್ಲ ಎಂದು ಪದೇ ಪದೆ ಹೇಳುವುದರ ರಹಸ್ಯ?
ಸತ್ಯವಂತ ಸಂತಾನದ ನನಗೆ ಮೋಸವಾಗಿದೆ, ಕೇಳಿಸಿಕೊಳ್ಳಿ ಎಂಬ ಮುನ್ನುಡಿ!
- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com