ತಪ್ಪಾಯ್ತು ತಿದ್ಕೋತೀವಿ

Updated on: 

ಬೆಂಗಳೂರಿನಿಂದ ಎನ್.ಜಿ. ವೇಣಗೋಪಾಲ್ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ-
'ಪತ್ರಿಕಾರಂಗದ ಹಿರಿಯ ದಿಗ್ಗಜ 'ಸತ್ಯ' ಅವರ ವರದಿಯಲ್ಲೇ ತಪ್ಪು ಕಂಡಿದ್ದರಿಂದ ಈ ಪತ್ರ. ಈ ತಪ್ಪು ಅವರ ಕಡೆಯಿಂದ ಆದ ತಪ್ಪಂತೂ ಖಂಡಿತಾ ಅಲ್ಲ ಎಂಬುದು ಗೊತ್ತು. ಆದರೆ ಯಾವ ಹಂತದಲ್ಲಿ ಯಾರ ಕೈವಾಡದಿಂದ ಆಗಿದೆಯೋ? ಒಟ್ಟಾರೆ ಅವರ ವರದಿಯಲ್ಲಿ ತಪ್ಪಾಗಿರುವುದು ಬಹಳವೇ ಬೇಸರದ ಸಂಗತಿ. 'ಈ ಕೆಟ್ಟ ರಾಜಕಾರಣ ಕೊನೆಗಾಣಲೇ ಬೇಕು' ಶೀರ್ಷಿಕೆಯಡಿಯ ಲೇಖನದ ಪ್ಯಾರಾ 5ರಲ್ಲಿ ಪ್ರಾರಂಭವಾದ ವಾಕ್ಯದಲ್ಲಿ 'ಯಡಿಯೂರಪ್ಪ- ಶ್ರೀನಿವಾಸಲು ಅವರು' ಎಂದಿದೆ. ಇದು 'ಯಡಿಯೂರಪ್ಪ-ಶ್ರೀರಾಮುಲು ಅವರು' ಎಂದಿರಬೇಕಿತ್ತು. ಇನ್ನು ಪ್ಯಾರಾ 6ರ ಪ್ರಾರಂಭದ ಪದ "ಉಳಿದಂತೆ" ಎಂಬಲ್ಲಿ "ಉ" ಕಣ್ಮರೆಯಾಗಿದೆ.'
'ನನ್ನ ಹಿಂದಿನ ಪತ್ರದಲ್ಲಿ, ಫೆ.25ರ ಪತ್ರಿಕೆಯಲ್ಲಿನ ಪದಗಳಲ್ಲಿ ಒಂದೊಂದು ಅಕ್ಷರ ಕಣ್ಮರೆಯಾದ ಬಗ್ಗೆ ಬರೆದಿದ್ದೆ. ಅದಕ್ಕೆ ಮಾರ್ಚ್ 12ರಂದು "ತಪ್ಪಾಯ್ತು ತಿದ್ಕೋತೀವಿ" ಅಂಕಣದಲ್ಲಿ ಉತ್ತರಿಸಿದ್ದೀರಿ. ಧನ್ಯವಾದಗಳು. ಅಂಥದ್ದೇ ತಪ್ಪು ಈ ಮಾರ್ಚ್ 7ರ ಪತ್ರಿಕೆಯಲ್ಲೂ ಇಣುಕಿದೆ.'
'ಮೇಲೆ ಬರೆದಿರುವ 'ಉಳಿದಂತೆ' ಪದದಲ್ಲಿನ 'ಉ' ಕಣ್ಮರೆ ಒಂದು. ಪುಟ 2ರಲ್ಲಿ 'ಯುವಕನ ಹತ್ಯೆ: ಮಾಲೂರು ವೈದ್ಯ, ಸಹೋದರನ ಬಂಧನ' ಶೀರ್ಷಿಕೆಯಡಿ ಪ್ಯಾರಾ 3ರ 5ನೇ ಸಾಲಿನಲ್ಲಿ 'ನಿವೇಶನವನ್ನು' ಎಂಬಲ್ಲಿ 'ನ' ಕಣ್ಮರೆಯಾಗಿದೆ.'
'ಪುಟ 7ರಲ್ಲಿ 'ಮತಗಟ್ಟೆಗಳಲ್ಲಿ ಫ್ಯಾನ್ ತಿರುಗಲ್ಲ' ಶೀರ್ಷಿಕೆಯಡಿ ಪ್ಯಾರಾ 2ರ 4-5ನೇ ಸಾಲಿನಲ್ಲಿ 'ಸ್ಪರ್ಧಿಸಿದ್ದಾರೆ' ಎಂಬಲ್ಲಿ 'ಸಿ'  ಕಣ್ಮರೆಯಾಗಿದೆ.
'ಪುಟ 12ರಲ್ಲಿ '3 ವರ್ಷದಲ್ಲಿ 75 ಸಾವಿರ ಮಕ್ಕಳು ನಾಪತ್ತೆ' ಶೀರ್ಷಿಕೆಯಡಿ 5ನೇ ಸಾಲಿನಲ್ಲಿ 'ಪ್ರಕರಣಗಳನ್ನು' ಎಂಬಲ್ಲಿ 'ಣ' ಕಣ್ಮರೆಯಾಗಿದೆ.'
'ಪುಟ 15ರಲ್ಲಿ 'ಮನ್ನಾಕ್ಕೆ ಆಗಿಲ್ಲ ಕನ್ನ: ಪವಾರ್' ಶೀರ್ಷಿಕೆಯಡಿ ವರದಿಯ ಕೊನೇ ಪದ ಸೂಚಿಸಿದ್ದಾರೆ ಎಂಬಲ್ಲಿ 'ಸಿ' ಕಣ್ಮರೆಯಾಗಿದೆ.'
'ಇನ್ನುಳಿದಂತೆ, ಬೋನಸ್ ಪದಗಳು, ಬೇರೆ ತಪ್ಪುಗಳೂ ಇವೆ. ಮುಖಪುಟದಲ್ಲಿನ 'ರಾಜ್ಯಕ್ಕೆ ವಿದ್ಯುತ್ ಕೊಡೆಂಗುಳಂ' ಶೀರ್ಷಿಕೆ ಪಕ್ಕದ 'ಯಾರಿಗೆ ಎಷ್ಟು?' ಉಪಶೀರ್ಷಿಕೆಯಡಿ 'ಪಾಂಡಿಚೆರಿ' ಎಂಬುದು 'ಪಾಂಡಿಚೇರಿ' ಆಗಿದೆ.
'ಇದೇ ಶೀರ್ಷಿಕೆಯ ಮತ್ತೊಂದು ಉಪಶೀರ್ಷಿಕೆ, 'ಮೊದಲ ಘಟಕ ಏಪ್ರಿಲ್ನಲ್ಲಿ' ವರದಿಯ 5 ಮತ್ತು 6ನೇ ಸಾಲಿನಲ್ಲಿ ಪೈಕಿ ಎಂಬಲ್ಲಿ 'ಪೈಪಿ' ಎನ್ನುವ ಇನ್ನೊಂದು ಪದ ಬೋನಸ್ ಇದೆ.'
'ಇದೇ ಪುಟದ 'ಸಿಸಿಟಿವಿ ತೋರಿಸಿ ಸಂಚು ಮಾಡಿದ ನಿತ್ಯಾ' ಶೀರ್ಷಿಕೆಯಡಿಯ ನಿತ್ಯಾ ವಿರುದ್ಧ ದೂರು ಉಪಶೀರ್ಷಿಕೆಯಡಿಯಲ್ಲಿನ 5ನೇ ಸಾಲಿನಲ್ಲಿ 'ಸ್ವೀಕೃತಿ' ಪದ 'ಸ್ವಿಕೃತಿ' ಆಗಿದೆ.'
'ಪುಟ 2ರಲ್ಲಿ 'ನಗರದಲ್ಲಿ ರು. 100 ಕೋಟಿ ನೀರುಗಳ್ಳರು!' ಶೀರ್ಷಿಕೆಯಡಿ ಪ್ಯಾರಾ 2ರ 2ನೇ ಸಾಲಿನಲ್ಲಿ 'ಕಳ್ಳರನ್ನು' ಎಂಬುದು 'ಕಳ್ಳರುನ್ನು' ಆಗಿದೆ.
'ಇದೇ ವರದಿಯ ಪ್ಯಾರಾ 7ರ ಕೊನೆಯಲ್ಲಿ 'ಅಧಿಕಾರಿಗಳು' ಎಂಬಲ್ಲಿ 'ಅಧಿಕಾರಿಗಳು' ಎನ್ನುವ ಇನ್ನೊಂದು ಪದ ಬೋನಸ್ ಇದ್ದು, ಈ ಬೋನಸ್ ಪದದಲ್ಲಿ 'ಗ' ಕಣ್ಮರೆಯಾಗಿದೆ. (ಅಧಿಕಾರಿಗಳು ಎಂಬಲ್ಲಿ ಒಂದು ಅಧಿಕಾರಿಗಳೂ ಎಂದೂ, ಇನ್ನೊಂದು ಅಧಿಕಾರಿಗಳು ಎಂದೂ ಇದೆ! ಇರಲಿ)
'ಇದೇ ವರದಿಯ ಪ್ಯಾರಾ 12ರ ಮೊದಲ ಸಾಲಿನಲ್ಲಿ ಅಪಾರ್ಟ್ಮೆಂಟ್ಗಳಲ್ಲಿ ಎನ್ನುವುದು 'ಅಪಾರ್ಟಾಮೆಂಟ್ಗಳಲ್ಲಿ' ಆಗಿದೆ.'
'ಇನ್ನು ಪುಟ 3ರಲ್ಲಿ '12-13ರಂದು ಕೆಪಿಎಸ್ಸಿ ಸಂದರ್ಶನ' ಶೀರ್ಷಿಕೆಯಡಿಯ ವರದಿಯ ಕೊನೆಯ ಸಾಲಿನಲ್ಲಿ 'ಸಂಪರ್ಕಿಸಲು' ಎನ್ನುವುದು 'ಸಂದರ್ಶಿಸಲು ' ಆಗಿದೆ.
(ಮುಂದುವರಿಯುವುದು)

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com