ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಜೀನ್ಸ್ ಧರಿಸಿದ ಯುವತಿಗೆ ಸೀರೆಯುಡಲು ಸಲಹೆ ಇತ್ತಿದ್ದಕ್ಕೆ, ನೀ ಕಚ್ಚೆ ಪಂಚೆ ಉಡು ಅಂದಳಲ್ಲ?
ಈ ಬೇಸಿಗೇಲಿ ನಾನು ಶರ್ಟು- ಬನೀನು ಹಾಕೋದೆ ಇಲ್ಲ ಅಂತಂದು ನೋಡಿ!
ಬಿ. ಎಂ. ಪರಶಿವಮೂರ್ತಿ, ಬೆಂಗಳೂರು
ಸಿನಿಮಾದ ನಟಿಪಾತ್ರ ಯಾವಾಗಲೂ ನನಗೀಗ ಮೂರು ತಿಂಗಳು ತುಂಬಿದೆ ಅನ್ನುತ್ತಿರುತ್ತೆ. ಹೆಚ್ಗೆ ಹೇಳಿದ್ರೆ ನಷ್ಟವೇನು?
ಹೆಚ್ಗೆ ಹೇಳಿದ್ರೆ ಸಿನಿಮಾದ ಕತೆ ಬೇಗ ಮುಗಿದುಹೋಗುತ್ತಲ್ಲ!
ರಮೇಶ್ ಭಟ್ ಆವರ್ಸೆ, ಕುಂದಾಪುರ 9164276058
ಇಂದಿನ ಕಾಲದಲ್ಲಿ ಪ್ರಾಮಾಣಿಕತೆಯೇ ಮಾಯವಾಗುತ್ತಿದೆಯಲ್ಲ?
ಪೊಲೀಸ್ ಕಂಪ್ಲೇಂಟ್ ಕೊಟ್ರಾ?
ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, 9901257131
ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೂ ಒಬ್ಬ ಗಂಡನನ್ನು ಬಿಟ್ಟು ಇನ್ನೊಬ್ಬನನ್ನು ಅಪ್ಪಿಕೊಳ್ಳುವ ಹೆಂಗಸಿಗೂ ವ್ಯತ್ಯಾಸವೇನು?
ಒಂದು ಪಕ್ಷಾಂತರ, ಇನ್ನೊಂದು ಗಂಡಾಂತರ!
ಎಂ. ಬಿ. ಕೃಷ್ಣಮೂರ್ತಿ 9449130531
ಕೆಲವು ಹುಡುಗಿಯರನ್ನು ನೋಡುತ್ತ ಇದ್ದರೆ ನೋಡ್ತಾನೇ ಇರಬೇಕು ಅನ್ನಿಸುತ್ತದಲ್ಲಾ?
ಮುಂದಿನ ಕಲಾಪಕ್ಕೆ ಧೈರ್ಯವಿಲ್ಲದಿದ್ದರೆ ಹಂಗೇ ಆಗೋದು!
-ಬಾಣಭಟ್ಟ