ಕೆಲ ಹುಡ್ಗೀರನ್ನು ಪ್ರೀತಿಸಬೇಕಾದ್ರೆ ಹುಡುಗರ 'ಪರ್ಸ್' ತುಂಬಿರಬೇಕಂತೆ?
ಅದು ಅವರ 'ಪರ್ಸ್'ನಲ್ ವಿಷಯ
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹೋದ ವರ್ಷ ಉಗಾದಿಗೇ ಹದಿನೆಂಟು ತುಂಬೋಯ್ತು ಅಂತಿದಾಳಲ್ಲ?
ಒಂದು ವರ್ಷ ವೇಸ್ಟಾಯ್ತು ಅಂತಿರಬೇಕು!
ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಅಂತ
ಮೆಸೇಜ್ ಕಳ್ಸಿದ್ದಾಳಲ್ಲ?
ಪ್ಯಾರ್ ನಹಿ ಕಿಯಾ ತೋ ಮರ್ನಾ ಕ್ಯಾ ಅಂತ ರಿಪ್ಲೈ ಹಾಕಿ ನೋಡು.
ಬರ್ಕಲಿರಾಮ ಕಿರಗಂದೂರು, ಮಂಡ್ಯ
ಇಲ್ಲೇ ಸ್ವರ್ಗ, ಇಲ್ಲೇ ನರಕ ಅಂತಾರಲ್ಲ. ಅದು ಎಲ್ಲಿದೆಯಣ್ಣಾ?
ಬಿಜೆಪಿಯವರನ್ನು ಕೇಳಿನೋಡು, ಸರಿಯಾಗಿ ಹೇಳಬಲ್ಲರು!
ಕೆನ್ನಾಳು ಭಾಸ್ಕರ, 9036416729
ನಿಜವಾದ ಬಣ್ಣ ಬಯಲಾಗುವುದು ಯಾವಾಗ ಭಟ್ರೇ?
ಬಟ್ಟೆಯಾದರೆ ನೀರಿಗೆ ಹಾಕಿದಾಗ, ರಾಜಕಾರಣಿಯಾದರೆ ಮತಕ್ಕೆ ಹಾಕಿದಾಗ.