ಕತ್ತಲೆ ತುಂಬಿದ ಬಾಳಿಗೆ ಬೆಳದಿಂಗಳಾಗು ಬಾ ಅಂತ ಕರೀತಿದಾಳಲ್ಲ?
ಕರೆಂಟ್ ಬಿಲ್ ಕಟ್ಟಿಲ್ಲ ಅನ್ಸುತ್ತೆ!
ವಿ.ಹೇಮಂತಕುಮಾರ 9035992900
ಪಿ.ಎಸ್. ಜಯತೀರ್ಥ, ಬೆಂಗಳೂರು
'ಕೈ'ಯಿಂದ 'ತೆಂಗಿನಕಾಯಿ' ಒಡೆದು, ದನಕ್ಕೆ 'ಹುಲ್ಲು ಹೊರೆ' ಹಾಕಿ, 'ಕಮಲ'ದಿಂದ ಪೂಜಿಸುವ ವೇಳೆ 'ಫ್ಯಾನ್' ಗಾಳಿಯಿಂದ ದೀಪ ಆರಿದರೆ 'ವೋಟುದಾರಿಗೆ' ಅಪಶಕುನವೇ?
'ತೆನೆ'ಯ ಭಾರ ಹೊರಲಾರದೇ, 'ತೆಂಗಿನಕಾಯಿ'ಯನ್ನು ಚಿಪ್ಪೆಂದು ಹಳಿದು, 'ಫ್ಯಾನ್' ಬಳಿ ಹೋದಾಗ ಗಾಳಿಯಿಂದ ದೀಪ ಆರಿದ್ದರಿಂದಲೇ 'ಪೂಜಾ'ಫಲ ಸಿಗಲಿಲ್ಲ!
ವಿ. ಹೇಮಂತಕುಮಾರ, ಬೆಂಗಳೂರು
ಹಾಲನ್ನು ಕಾಯಿಸಿದರೆ ಉಕ್ಕುತ್ತದೆ, ಪ್ರೀತಿಯನ್ನು ಕಾಯಿಸಿದರೆ?
ಬೇರೆಯವರಿಗೆ ದಕ್ಕುತ್ತದೆ!
ಚಿರಪ್ರಭ ನಂಜನಗೂಡು, 8553793107
ಕೋಲ್ಕತಾದಲ್ಲಿ 'ದೀದಿ'ಯ ಗದ್ದಲ, ಚೆನ್ನೈನಲ್ಲಿ ್ಣ'ಅಮ್ಮ'ನ ಅಬ್ಬರ, ದೆಹಲಿಯಲ್ಲಿ?
'ಶೀಲ'ಹರಣ!
ಬಸವನಗೌಡ ಹೆಬ್ಬಳಗೆರೆ
ಅದೇ ಹಾಲು, ಕಾಫಿಪುಡಿ ಬಳಸಿದರೂ ಕಾಫಿ ಡೇನಲ್ಲಿ ಕಾಫಿ ಬೆಲೆ ಏಕೆ ಜಾಸ್ತಿ?
ಅಲ್ಲಿ ಡೇ ಪೂರ್ತಿ ಕುಳಿತು ಕಾಫಿ ಕುಡಿಯುವ ಅವಕಾಶ ಕೊಡುತ್ತಾರಾದ್ದರಿಂದ.