ರಮೇಶ ಭಟ್ ಆವರ್ಸೆ, 9164276058
ಶ್ರೀಮಂತರಿಗೆ ಬೇಕಾದಷ್ಟು ಸಾಲ ನೀಡುವ ಬ್ಯಾಂಕ್ಗಳು ಅದೇ ಬಡವರಿಗೆ ಮಾತ್ರ ಯಾಕೆ ಕೊಡಲ್ಲ?
ಸಾಲ ಪಡೆಯುವುದಕ್ಕೆ ಇರುವ ಮೊದಲ ಅರ್ಹತೆಯೇ ನಿಮಗೆ ಸಾಲ ಏಕೆ ಅಗತ್ಯವಿಲ್ಲ ಎಂಬುದನ್ನು ನಿರೂಪಿಸುವುದು!
ಉಜ್ಜನಿ ಜಲೇಂದ್ರ 8971857200
ಹೆಣ್ಣು, ಹೊನ್ನು, ಮಣ್ಣು ಅಂತ ಹೇಳುತ್ತಾರೆಯೇ ಹೊರತು ಗಂಡು, ಹೊನ್ನು, ಮಣ್ಣು ಅಂತ ಯಾಕೆ ಹೇಳುವುದಿಲ್ಲ?
ಆತ ಎಲ್ಲ ಕಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ!
ಜೆ. ಪಿ. ನಾಗರಾಜ, ದಾವಣಗೆರೆ
ದೂರವಿದ್ದಷ್ಟೂ ಪ್ರೀತಿ ಹೆಚ್ಚಾಗುತ್ತಿದೆ ಎಂದು ಅವಳು ಎಸ್ಎಂಎಸ್ ಕಳುಹಿಸಿದ್ದಾಳೆ...
ಪ್ರೀತಿ ಹೆಚ್ಚಾದೀತು. ಆದರೆ ಯಾರೊಂದಿಗೆ ಎಂಬುದು ತುಂಬ ಮುಖ್ಯ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪರಿಚಿತರೊಬ್ಬರು ತಮ್ಮ ಮಡದಿಯ ಮಾತಿನ ಆರ್ಭಟಕ್ಕೆ ಬೆದರಿ ಬೆಂಡಾಗುತ್ತಾರಲ್ಲ?
ನಿಂಗೆ ಗೊತ್ತಿಲ್ಲ, ಅಪರಿಚಿತರೂ ಅವರ ಹೆಂಡತಿ ಆರ್ಭಟಕ್ಕೆ ಹೆದರುತ್ತಾರೆ!
ರಮೇಶ ನಾ. ಖೇಡಗಿ, ಹೀರೆಮಸಳೆ
ಆಂಟಿಯರು ಇತ್ತೀಚೆಗೆ ನೈಟಿ ಹಾಕಿ ಊರು ಸುತ್ತುತ್ತಿರುತ್ತಾರಲ್ಲ..
ಅದನ್ನೂ ಹಾಕಬಾರದು ಎಂದರೆ ಹೇಗಪ್ಪ?
-ಬಾಣಭಟ್ಟ