ಆರೀಫ್ (ಅಪ್ಪು) ದಾವಣಗೆರೆ, 9964280609
ಹುಡುಗಿಯರು ಸಣ್ಣ-ಪುಟ್ಟ ವಿಷಯಕ್ಕೆಲ್ಲಾ ಕೋಪಿಸಿಕೊಳ್ಳೋದೇಕೆ?
ದೊಡ್ಡ ವಿಷಯಗಳ ಬಗ್ಗೆ ಅವರು ತಲೆಹಾಕುವುದಿಲ್ಲವಾದ್ದರಿಂದ!
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ಆಹ್ವಾನ ಪತ್ರಿಕೆಯಲ್ಲಿ ನಿಮ್ಮ ಹೆಸರು ನಮ್ಮ ಮನದಲ್ಲಿ ಅನ್ನುತ್ತಾರೆ. ಆಮೇಲೆ ನಮ್ಮ ಹೆಸರು ಏನು ಹೇಳಿ ಅಂದರೆ ತಡವರಿಸುತ್ತಾರೇಕೆ?
ಮನಸಲ್ಲಿದೆ ಬಾಯಿಗೆ ಬರಲ್ಲ ಅಂದರೆ ಇದೇ ನೋಡಿ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಮನುಷ್ಯ ಮಾಡಬಹುದಾದ ಅತಿದೊಡ್ಡ ತಪ್ಪು ಯಾವುದು?
ಯಾವುದೂ ದೊಡ್ಡ ತಪ್ಪಲ್ಲ ಅಂತ ಭಾವಿಸುವುದು!
ನೇರಲಗುಡ್ಡ ಶಿವಕುಮಾರ, ಸಿರಾ, 9480343742
ರಾಜಕಾರಣಿಗಳ ಲೂಟಿಗೂ ಕಳ್ಳಕಾಕರ ದರೋಡೆಗೂ ಇರುವ ಭಿನ್ನತೆ ಏನು?
ರಾಜಕಾರಣಿಗಳು ನಮ್ಮಿಂದಲೇ ಆಯ್ಕೆಯಾಗಿರುತ್ತಾರೆ. ಕಳ್ಳರದ್ದು ಸ್ವಯಂ ಆಯ್ಕೆ.
ಪೇಂಟರ್ ಪಾಪು ಸಂತೇಮರಹಳ್ಳಿ, 9008877712
ಪ್ರೀತಿ ಮಾಡಿ ಮೋಸ ಮಾಡುತ್ತಾರೆ. ಸ್ನೇಹ ಮಾಡಿ ಮರೆತುಹೋಗುತ್ತಾರೆ. ಯಾಕೆ ಹೀಗೆ?
ಮಿಸ್ಡ್ ಕಾಲ್ ಕೊಟ್ಟು ಸ್ವಿಚ್ಆಫ್ ಮಾಡುವವರೂ ಇದ್ದಾರೆ!
-ಬಾಣಭಟ್ಟ