ಫ್ಯಾಷನ್ ಡಿಸೈನರ್ ಮಧು 9945737427
ಪ್ರಣಯದ ಬೆಸುಗೆ ಗಟ್ಟಿಯಾಗಿದ್ದರೆ ವಿರಹದ ಬೇಗೆ ಮನಸ್ಸನ್ನು ಸುಡಲಾರದು ಅಲ್ವಾ?
ವಿರಹದ ಬೇಗೆಯಲ್ಲೂ ಇನ್ನೊಬ್ಬರಲ್ಲಿ ಬೆಸುಗೆ ಹುಡುಕಿಕೊಂಡರೆ ಕಷ್ಟ!
ಬರ್ಕ್ಲಿ ರಮೇಶ್, ಕಿರಗಂದೂರು 9008741348
ರಾಜಕೀಯದಲ್ಲಿ ಕೆಲಮಂದಿಗೆ ಮಾನ-ಮರ್ಯಾದೆ ಇದೆಯಾ?
ಅವರಿಗೆ ಅದನ್ನು ಕೊಡುವುದು ಅಥವಾ ಕಳೆಯುವುದು ಜನಸಾಮಾನ್ಯರ ಕೈಯಲ್ಲೇ ಇದೆ.
ನೇರಲಗುಡ್ಡ ಶಿವಕುಮಾರ್ 9480343742
ನಿಮ್ಮ ರೋಲ್ ಮಾಡೆಲ್ ಯಾರು?
ರೋಲ್ ಎಂಬ ಪದ ಸೇರಿಸಿದ್ದೇಕೆ ಅರ್ಥವಾಗಿಲ್ಲ. ಮಾಡೆಲ್ಗಳು ಮನಸ್ಸಿನಲ್ಲಿ ಬಹಳ ಇದ್ದಾರೆ ಬಿಡಪ್ಪಾ!
ಹರಳಹಳ್ಳಿ ಪುಟ್ಟರಾಜು, 9632838088
ಆವೇಶ ಬಂದಾಗ ಜನರು ಇಂಗ್ಲಿಷಿನಲ್ಲಿ ಬಯ್ಯುವುದರ ಮರ್ಮವೇನು?
ಮಾತೃಭಾಷೆಯನ್ನು ಮಲಿನವಾಗಿಸುವುದೇಕೆ ಎಂಬ ಕಾಳಜಿ ಇರಬಹುದು!
ಎನ್. ಕಾಂತೇಶ್, ವಿಜಾಪುರ
ನಿಮ್ಮ ದೃಷ್ಟಿಯಲ್ಲಿ ಯಾವ ಪಕ್ಷ ಒಳ್ಳೆಯದು?
ಇದೊಳ್ಳೆ ನೇಣು ಒಳ್ಳೆಯದಾ, ವಿಷಪ್ರಾಶನವಾಅಂತ ಕೇಳಿದ ಹಾಗಿದೆ!
-ಬಾಣಭಟ್ಟ