ಪ್ರೀತಿ, ಪ್ರೇಮ, ಪ್ರಣಯಕ್ಕೆ ಗಟ್ಟಿ ಬುನಾದಿ ಯಾವುದು?
ವಿಶ್ವಾಸದ ಪ್ರಣತಿ
ಜಗದೀಶ ಎಂ. ಎಸ್. ಬೆಳಗಾವಿ 8722444410
ರಾಖಿಸಾವಂತ್ ತಾನು ಉಡುವ ಬಟ್ಟೆಗೆ ಹೆಚ್ಚಿನ ಪ್ರಾಮುಖ್ಯ ಕೋಡೋದಿಲ್ವಲ್ಲ?
ಹಾಗಾದರೂ ನೀವೆಲ್ಲ ಆಕೆಗೆ ಕೊಡುವ ಪ್ರಾಮುಖ್ಯ ಹೆಚ್ಚಾಗಲಿ ಅಂತ!
ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಮದುವೆ ಆದ ನಂತರ ಮೊದಲು ಏನು ಮಾಡಬೇಕು ಅಂತ ಶಿಷ್ಯ ಕೇಳುತ್ತಿದ್ದಾನೆ...
ಹಸೆಮಣೆ ಇಳಿಯುತ್ತಲೇ ಏರಲಿಕ್ಕೆ ಹೇಳಿ....... ಸಂಸಾರದ ಬಂಡಿಯನ್ನು..
ಕೆನ್ನಾಳು ಭಾಸ್ಕರ್, 9036416729
ಹಣದ ದಾಹಕ್ಕೂ, ಅಧಿಕಾರದ ಮೋಹಕ್ಕೂ ಏನಾದರೂ ವ್ಯತ್ಯಾಸವಿದೆಯೇ?
ನೀ ಕೇಳಿದ ಪ್ರಶ್ನೆಗೆ ದಾಹ ಮತ್ತು ಮೋಹದ ಹಕಾರಗಳು ಒಟ್ಟು ಸೇರಿ 'ಹಹ್ಹ' ಎಂದು ನಕ್ಕವು!
ಎಂ. ಬಿ. ಕೃಷ್ಣಮೂರ್ತಿ, 9449130531
ದೇವೇಂದ್ರನೇನಾದರೂ ಪ್ರತ್ಯಕ್ಷನಾದರೆ ಯಾವ ವರ ಕೇಳುತ್ತೀರಿ?
ಯಾವ ಕಾಲದಲ್ಲಿದ್ದೀ ಮಾರಾಯಾ? ಧೀರೂಭಾಯ್ ಅಂಬಾನಿ ಆತ್ಮ ಪ್ರತ್ಯಕ್ಷವಾದರೆ ಅಂತ ಕೇಳಿದರೆ ಆಸೆಯಾದರೂ ಹುಟ್ಟುತ್ತಿತ್ತು!
ಬರ್ಕ್ಲಿ ರಮೇಶ್, 9008741348
- ಬಾಣಭಟ್ಟ