ನಾರಿ ಮುನಿದರೆ ಮಾರಿ, ಪುರುಷ ಮುನಿದರೆ..?

Updated on: 

ಹರಳಹಳ್ಳಿ ಪುಟ್ಟರಾಜು, 9632838088
ನಾರಿ ಮುನಿದರೆ ಮಾರಿ, ಪುರುಷ ಮುನಿದರೆ..?
ಒಳ್ಳೆ ರೇಟು ಬಂದರೆ ಅವನನ್ನೂ ಮಾರಿ!

ಫ್ಯಾಷನ್ ಡಿಸೈನರ್ ಮಧು, 99457-37427
ಒಟ್ಟಾಗಿ ಬದುಕುವುದರಲ್ಲಿ ಸ್ವರ್ಗಸುಖವಿದೆ ಎಂಬ ಜೇನುಹುಳುಗಳಿಗೆ ಇರುವ ಬುದ್ಧಿ ಮನುಷ್ಯನಿಗೇಕಿಲ್ಲ?
ಹೇಗೋ ಕುಟುಕುವ ಬುದ್ಧಿ ಮಾತ್ರ ಮನುಷ್ಯನಿಗೆ ಅನಾಯಾಸವಾಗಿ ಬಂದಿದೆ!

ಕೆನ್ನಾಳು ಭಾಸ್ಕರ್, 9036416729
ತಾವು ಕನಸುಗಳನ್ನು ಬಿತ್ತುವುದರಲ್ಲಿ ನಿಸ್ಸೀಮರಂತೆ?
ಎಲ್ಲಾ ಸೃಷ್ಟಿಶೀಲ ಬಿತ್ತನೆ ಪ್ರಕ್ರಿಯೆಗಳಲ್ಲೂ ಪುರುಷನಾದವನು ಪಾರಮ್ಯ ಮೆರೆದಿರಬೇಕಲ್ಲವೇ?

ಪವನಕುಮಾರ ಕೆ. ವಿ. ಬಳ್ಳಾರಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎಂದು ದಾಸರು ಹೇಳಿದ್ದರೂ ಕೋಟಿ ಕೋಟಿ ಲೂಟಿ ಏಕೆ?
ತಮ್ಮ ಹೊಟ್ಟೆಯ ವ್ಯಾಪ್ತಿ ಅಗಾಧ ಎಂಬ ಭ್ರಾಂತಿಗೆ ಬಿದ್ದವರು ಹುಟ್ಟುಹಾಕಿರುವ ಪರಿಣಾಮವಿದು.

ಎಂ. ಜಿ. ಶಿವರಾಂ, ಬೆಂಗಳೂರು
ನಮ್ಮ ಪೂರ್ವಿಕರು ವೃಕ್ಷಪೂಜೆ, ವನಮಹೋತ್ಸವ ಆಚರಿಸುತ್ತಿದ್ದರು, ನಾವು?
ನಮ್ಮದು ಒಣ ಮಹೋತ್ಸವ!


- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com