ವ್ಯಕ್ತಿಗೆ 'ಬದುಕು' ಮುಖ್ಯವೋ ಅಥವಾ 'ಸೆಂಟಿಮೆಂಟ್' ಮುಖ್ಯವೋ?
'ಬದುಕಿ'ದ್ದರೆ ಸೆಂಟಿಮೆಂಟ್ ಇಲ್ಲದಾದಲ್ಲಿ ಓನ್ಲಿ ಡಿಸಪಾಯಿಂಟ್ಮೆಂಟ್.
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಕ್ರಿಕೆಟ್ ಜೆಂಟಲ್ಮ್ಯಾನ್ಗಳ ಆಟ ಎಂಬುದೇ ಅನುಮಾನವಾಗುತ್ತಿದೆಯಲ್ಲ?
ಕೆಲವರು ಬ್ಯಾಟಿಂಗ್ (Batting) ಸ್ಪೆಲ್ಲಿಂಗನ್ನು ಬದಲಾಯಿಸಿದ್ದರ (Betting) ಪರಿಣಾಮವಿದು.
ವಿಷ್ಣುಶಂಕರ್, ಶಿವಮೊಗ್ಗ
ಈಗಿನ ಹುಡುಗರು ತಾಯಿಗೆ ಸೀರೆ ಕೊಡಿಸಲ್ಲ. ಗೆಳತಿಗೆ ಮೊಬೈಲ್ ಕೊಡಿಸ್ತಾರಲ್ಲ?
ತುತ್ತಿಗಿಂತ ಮುತ್ತು ಕಾಸ್ಟ್ಲಿ ಕಣ್ಲಾ!
ಜೆ.ಪಿ. ನಾಗರಾಜ, ದಾವಣಗೆರೆ
ರಾತ್ರಿ ಕಂಡ ಕನಸುಗಳೆಲ್ಲ ನನಸಾಗುವಂತಿದ್ದಿದ್ರೆ?
ಬೆಳಗ್ಗೆ ಏಳೋ ಕಷ್ಟ ಯಾರೂ ತಗೋತಾ ಇರ್ಲಿಲ್ಲ
ಜೆ.ಪಿ.ನಾಗರಾಜ, ದಾವಣಗೆರೆ, 9901193811
ಮತದಾರನ ಕಿಮ್ಮತ್ತು ಮತದಾನ ಮಾಡುವವರೆಗೆ, ರಾಜಕಾರಣಿಯ ಕಿಮ್ಮತ್ತು?
ಅಧಿಕಾರ ಇರುವವರೆಗೆ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
-ಬಾಣಭಟ್ಟ