ಇದು ಹರಿಶ್ಚಂದ್ರನ ಹೆಸರಿನಲ್ಲಿರುವ ಪೇಟೆಂಟ್
ಸುಳ್ಳು ಧರಿಸುವ ಚೆಂದದ ಮುಖವಾಡ
ಕೋರ್ಟಿನಲ್ಲಿ ಉಪಯೋಗಿಸುವ ಸುಳ್ಳಿಗೆ ಇದೇ ಹೆಸರು
ಬೇರೆಯವರು ಅಹುದಹುದೆನ್ನುವಂತೆ ನಂಬಿಸಲ್ಪಡುವ ವಿಷಯ
ಸತ್ಯನಾಶವಾಗುವ ಸಂದರ್ಭ ಬಂದರೂ ನಮ್ಮಲ್ಲಿನ ಸತ್ಯ ನಾಶವಾಗಲು ಬಿಡಬಾರದು
ಮಿಥ್ಯೆಯ ಶತ್ರು
ಬೇರೆಯವರಿಂದ ಎದೆ ಮೇಲೆ ಒದಿಸಿಕೊಳ್ಳುವ ಇದ್ದಿದ್ದು ಇದ್ಹಂಗೆ ಹೇಳುವಿಕೆ
ಗಂಡನ ಬಾಯಿಂದ ಅಪ್ಪಿ ತಪ್ಪಿ ಬರುವ ಮಾತು
ನಿಜ್...ವಾಗ್ಲೂ ಇದು ನಿಜವೇ
ನಿನ್ನೆ ನಡೆದದ್ದನ್ನು ಇಂದೂ ಹಾಗೇ ಹೇಳುವ ನನ್ನಿ
ಇಹದಲ್ಲಿ ಸುಖದ ಅಗತ್ಯವಿದ್ದವರು ಪರದಲ್ಲಿನ ಸುಖಕ್ಕಾಗಿ ಹೇಳುವ ನುಡಿ
ಸಂಗ್ರಾಮ
ಯೋಧನ ಅಮರನನ್ನಾಗಿಸುವ ಸಮರ
ಮೊದಲು ಸ್ವಾತಂತ್ರ್ಯಕ್ಕಾಗಿ ಸಂಗ್ರಾಮ ಈಗ ಸ್ವಾತಂತ್ರ್ಯವೆಲ್ಲ ಸಂಗ್ರಾಮಕ್ಕಾಗಿ
ಜಟೆ ಹಿಡಿದು ನೆಲಕ್ಕುರುಳಿಸುವ ಜಟ್ಟಿಗಳ ಜಟಾಪಟಿ
ದನಗಳ ನಡುವಿನ ತೀವ್ರತರ ಕದನ
ಸೈನಿಕರ ನಿತ್ಯಕರ್ಮ
ನಮ್ಮೆಲ್ಲರ ನೈಮಿತ್ತಿಕ ಕರ್ಮ
ವಿಶ್ವನಾಥ ಸುಂಕಸಾಳ
vishwasunkasal@yahoo.com