ವಾಸಕ್ಕೆಂದು ಕಟ್ಟಿಸಲು ಹೊರಟರೆ ಇದರ ಸಹವಾಸವೇ ಸಾಕು ಎನಿಸುವುದು
ಮನೆ ಬೆಳಗಿಸಲು ಕೆಲವರು ಮದುವೆಯಾಗುತ್ತಾರೆ. ಆಮೇಲೆ ಕರೆಂಟ್ ಬಲ್ಬ್ ಬಂದಾಗ ಗೊಣಗುತ್ತಾರೆ
ಮನೆ ಕಟ್ಟುವಾಗ ಎಲ್ಲರೂ ಸಲಹೆ ಕೊಡುವವರೇ. ಸಾಲ ಮಾತ್ರ ಕೊಡಲು ತಯಾರಾಗುವುದಿಲ್ಲ
ಮನೆ ಕಟ್ಟಿ ನೋಡು ಎಂಬುದು ಹಳೆ ಗಾದೆ. ಮನೆ ಮಾರಿ ನೋಡು ಎಂಬುದು ರಿಯಲ್ ಎಸ್ಟೇಟ್ ಗಾದೆ
ಬಾಡಿಗೆ ಮನೆಯಲ್ಲಿರುವುದಕ್ಕಿಂತ ಮನೆ ಬಾಡಿಗೆ ಕೊಡುವುದರಲ್ಲೇ ಹೆಚ್ಚಿನವರ ಕನಸಿದೆ
ಕಂತೆ ಕಂತೆ ಸುರಿದು ಕಂತು ಕಟ್ಟಲು ಕಾರಣವಾಗುವಂಥದ್ದು
ಇದು ಸ್ಥಾವರ. ಗೌಂಡಿ ಕೆಲಸದವರಿಗೆ ವರ
ಕಲ್ಲಿನ ಮೇಲೆ ಕಲ್ಲು ಇಟ್ಟು ಕಟ್ಟಿಗೆಯಿಂದ ಕಟ್ಟಿದ ಕಟ್ಟಡವೂ ಹೌದು
ಮನೆ ಕಟ್ಟಿದ ಮೇಲೆ ಗೌಂಡಿಯ ಹಂಗೇಕೆ?
ಪರಿವಾರದವರೆಲ್ಲ ಒಟ್ಟಿಗೆ ಆಡುವ ನಾಟಕದ ರಂಗಸ್ಥಳ
ಕೆಲವರಿಗೆ ಮನೆಯೆಂದರೆ ತುಂಬ ಕಾತರ, ಇನ್ನು ಕೆಲವರಿಗೆ ತುಂಬಾ ಭಯ. ಎರಡಕ್ಕೂ ಕಾರಣ ಹೆಂಡತಿ
ಮನಿ ಇರುವವ ಮಾತ್ರ ಮನೆ ಕಟ್ಟಿಸಬಲ್ಲ
ಕೆಲವರ ಮನೆಗಿಂತಲೂ ಕಸದ ತೊಟ್ಟಿಯೇ ಸ್ವಲ್ಪ ಕ್ಲೀನಾಗಿರುತ್ತೆ
-ವಿಶ್ವನಾಥ ಸುಂಕಸಾಳ
ಢ್ಝಝಢಿಛಡ್ಡಟ್ಞಿಛಡಛಟಅಣಝ್ಟ್ಟ.್ಛ್ಟಟ