ಬಣ್ಣ

Updated on: 

ನಯನ ಮಾತ್ರ ಗೋಚರೀ ಗುಣ
    ರೂಪ ಮತ್ತು ವಿರೂಪದ ಮಧ್ಯದ ರೇಖೆ
    ಇದನ್ನು ಮೆತ್ತಿಕೊಳ್ಳುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ 'ಬಣ್ಣಗೇಡಿ' ಎನಿಸಿಕೊಳ್ಳಬೇಕಾಗುತ್ತದೆ
    ರಾಜಕೀಯ ಪಕ್ಷಗಳು ಒಂದೊಂದು ಬಣ್ಣಕ್ಕೂ ಬೇರೊಂದು ಬಣ್ಣ ಕೊಡುತ್ತಾರೆ
    ಕೇಸರಿ ಬಣ್ಣ ತ್ಯಾಗವನ್ನು ಪ್ರತಿನಿಧಿಸುತ್ತದೆ. ಆದರೆ ಭೋಗಿಗಳೂ ಆ ಬಣ್ಣದ ಮರೆಯಲ್ಲಿ ಅಡಗುತ್ತಾರೆ
    ಹಸಿರು ಕ್ರಾಂತಿಯಾಗಬೇಕು ಎಂದರೆ ರಕ್ತಕ್ರಾಂತಿಗೆ ನುಗ್ಗುವವರೇ ಜಾಸ್ತಿ
    ಬಣ್ಣ ಮತ್ತು ನೆನಪಿಗೆ ಇರುವ ಸಾಮ್ಯತೆಯೆಂದರೆ ಎರಡೂ ಸ್ವಲ್ಪ ಕಾಲಕ್ಕೆ ಮಾಸಿ ಹೋಗುತ್ತದೆ ಮತ್ತು ಆಗಾಗ ಸಾಫ್ ಮಾಡುತ್ತಿರಬೇಕಾಗುತ್ತದೆ
    ಚಿತ್ತವನ್ನು ಚಿತ್ ಆಗಿಸುವ ಸಾಮರ್ಥ್ಯವುಳ್ಳದ್ದು
    ಎಲ್ಲರ ಕಂಗಳ ಸೆಳೆಯುವ ನೋಟವು ಇದರದ್ದು
    ಬಣ್ಣದ ಕುರಿತಾಗಿ ವಿಧವಿಧವಾಗಿ ವರ್ಣಿಸುವುದಕ್ಕೆ ಬಣ್ಣ-ನೆ ಅಥವಾ ವರ್ಣ-ನೆ ಎನ್ನಬಹುದು
    ಹೆಣ್ಣಿನ ಬಿನ್ನಾಣದ ಮೂಲ ಸ್ರೋತವೇ ಬಣ್ಣ
    ಕೆಲವರು ಬಣ್ಣವನ್ನು ಹಚ್ಚಿಕೊಳ್ಳುತ್ತಾರೆ. ಇನ್ನು ಕೆಲವರು ಮೆತ್ತಿಕೊಳ್ಳುತ್ತಾರೆ
    ಬಣ್ಣ ಹಚ್ಚುವ ಕೆಲಸಗಾರರದ್ದೂ ವರ್ಣಮಯ ಜೀವನವೇ
    ಎಲ್ಲ ವಸ್ತುವಿಗೂ ಒಂದೊಂದು ಬಣ್ಣ. ಆದರೆ, ಬಣ್ಣಕ್ಕೆ ಯಾವ ಬಣ್ಣವಯ್ಯಾ ಅಣ್ಣಾ?

ವಿಶ್ವನಾಥ ಸುಂಕಸಾಳ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com