ಮತ್ತೇರಿಸುವ ಮತ್ತೊಂದು ವಿಧಾನ
ಇದೂ ಕೂಡ ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧಿತವೇ!
ನಿಶ್ಶಬ್ದ ಬನಗಳಲ್ಲಿ ಚುಂ-ಬನಗಳದ್ದೇ ಮೊರೆತ
ಈ ವಿಷಯದಲ್ಲಿ ಹಲವರು ಗಾಂಧೀವಾದಿಗಳು. ಒಂದು ಕೆನ್ನೆಗೆ ಕೊಟ್ಟರೆ ಇನ್ನೊಂದು ಕೆನ್ನೆಯನ್ನು ತೋರಿಸುತ್ತಾರೆ
ನಲ್ಲ ನಲ್ಲೆಯರ ವಿವಾದ ಅಂತ್ಯಗೊಳ್ಳಬೇಕೆಂದರೆ ಈ 'ಗಲ್ಲ' ಶಿಕ್ಷೆಯನ್ನು ವಿಧಿಸಬೇಕು
ಥೂ ಥೂ ಎನ್ನುತ್ತಲೇ ಪ್ರಿಯೆ ತೋರುವ ಪ್ರೀತಿಯ ಸಂಕೇತವೇ ಮುತ್ತು
ಮುತ್ತು ಕೊಡುವುದರಲ್ಲಿ ಪರಿಣತನನ್ನು "ಮುತ್ತುರಾಜ" ಎನ್ನಬಹುದು
ಹತ್ತು ಪಡೆದ ಮೇಲೂ ಮತ್ತೂ ಬೇಕೆನಿಸುವಂಥದ್ದು
ತುಟಿಯಿಂದ ತುಟಿಗಾಗಿ ಮತ್ತು ತುಟಿಗೋಸ್ಕರ ...
ಬಿಟ್ಟಿ ಸಿಗದ ತುಟ್ಟಿ ಸರಕು.
ಮುಖ ಮೊಹರು
ಕೆನ್ನೆಯೆಂಬ ರಣರಂಗವನ್ನು ಕೆಂಪಾಗಿಸುವ ಓಷ್ಠ ಯುದ್ಧ
ಗೊತ್ತಾದರೆ ಕುತ್ತು.
ಮುತ್ತು ಕೊಡುವಾಗ ಎಲ್ಲರೂ ಮುತ್ತಪ್ಪರೇ
ಮುತ್ತಾತನ ಕಾಲದಿಂದಲೂ ಅವಿರತವಾಗಿ ಕೊಟ್ಟು ತೆಗೆದು ಮಾಡಿಕೊಂಡು ಬಂದಿರುವ ಭವ್ಯ ಇತಿಹಾಸ ಮುತ್ತಿಗಿದೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com