ಅರ್ಥವಿಲ್ಲದ ಜೀವನ
ಜನರಿದ್ದೂ ಪ್ರಯೋಜನಕ್ಕೆ ಬಾರದಿದ್ದಾಗ ಆಗುವ ನಿಷ್ಪ್ರಯೋಜನ
ತಲೆ ಖರ್ಚು ಮಾಡದವನ ತಲೆಯ ಮೇಲಿನ ಕಿರೀಟ
ನಾಯಿಯ ಬಾಲ ನೆಟ್ಟಗಾಗಿಸುವುದು
ಗಂಡನ ಬುದ್ಧಿ ಮಟ್ಟವಾಗಿಸುವುದು
ಹೆಂಗಳೆಯ ಡೊಂಕು ಸಮತಟ್ಟಾಗಿಸುವುದು
ಬುದ್ಧಿಜೀವಿಗಳಿಗೆ ಬುದ್ಧಿ ಹೇಳುವುದು
ಜಗತ್ತನ್ನೇ ಸುಧಾರಿಸುವ ಭ್ರಾಂತಿಯಲ್ಲಿ ಕ್ರಾಂತಿಯ ದಾರಿ ಹಿಡಿಯುವುದು
ಶ್ರೀಮಂತ ಮೂರ್ಖನ ಗೆಳೆತನ ಬೆಳೆಸುವುದು (ವ್ಯರ್ಥವಷ್ಟೇ ಅಲ್ಲ ಅನರ್ಥವೂ)
ಸುಖಕ್ಕಾಗಿ ಮದುವೆಯಾಗುವುದು
ಭಂಡರ ಜೊತೆ ಬಂಡವಾಳ ತೊಡಗಿಸುವುದು
ಕೂದಲು ಉದುರದಿರಲು ಔಷಧ ಖರೀದಿಸುವುದು
ನೆಗಡಿಗೆ ಮದ್ದು ಅರೆಯುವುದು
ಬೆಂಗಳೂರಿನ ಟ್ರಾಫಿಕ್ಕಿಗೆ ಹೊಸ ಯೋಜನೆಗಳನ್ನು ಜಾರಿಗೆ ತರುವುದು
ದೇಶವನ್ನೇ ಸುಧಾರಿಸುತ್ತೇನೆಂದು ಹೊರಡುವುದು
ವಿಶ್ವನಾಥ ಸುಂಕಸಾಳ
vishwasunkasal@yahoo.com