ಭಾರತ

Updated on: 

ಇಲ್ಲಿ ಹುಟ್ಟುವುದಕ್ಕೆ ಪುಣ್ಯ ಮಾಡಿರಬೇಕು. ಸಾಯುವುದಕ್ಕೆ ಅದು ಬೇಕಿಲ್ಲ
    ಭರತವಂಶದವರು ಆಳಿದ್ದು. ಈಗ ಜಡಭರತರಿಂದಲೇ ತುಂಬಿದ್ದು
    ಕೋಟಿ ಕೋಟಿ ವೀರರೆಲ್ಲಾ ಆಗಿ ಹೋದ ನಾಡು, ಈಗ ಕೋಟಿವೀರರ ಕೈಲಿ ನಡುಗುತ್ತಿರುವ ನಾಡು
    ಪರರ ಆಕ್ರಮಣವಾದಾಗೆಲ್ಲ ಪರಾಕ್ರಮದಿಂದ ಹೋರಾಡಿದ ದೇಶ.
    ಹಿಂದಿನಿಂದಲೂ ಹಿಂದೂಗಳು ಬಾಳಿ ಬದುಕಿದ ಹಿಂದೂಸ್ತಾನ
    ಭಾರತವನ್ನು ಕೊಲಂಬಸ್ ಕಂಡುಹಿಡಿಯದೇ ಇದ್ದಿದ್ದರೆ ನಮಗೆ ಆ ಅವಕಾಶ ಇರುತ್ತಿತ್ತು..
    ಈ ದೇಶದ ಇತಿಹಾಸವೇ ಒಂದು ದೊಡ್ಡ ರಾಮಾಯಣ
    ಆಗಾಗ ಪಕ್ಕದ ರಾಷ್ಟ್ರಗಳೊಂದಿಗೆ ಮಹಾಭಾರತ ನಡೆಯುವ ಕುರುಕ್ಷೇತ್ರ
    ಬ್ರಿಟಿಷರು ಸ್ವಾತಂತ್ರ್ಯವನ್ನು ಕೊಟ್ಟು ಹೋದರು. ಅದನ್ನು ರಾಜಕಾರಣಿಗಳು ಕಸಿದುಕೊಂಡರು
    ಇದನ್ನು ಭರತ ಖಂಡ ಎನ್ನುತ್ತಾರೆ ಯಾಕೆಂದರೆ ಇದು ಎಲ್ಲ ದಿಕ್ಕುಗಳಲ್ಲಿ ಖಂಡ ಖಂಡವಾಗಿ ಹಂಚಿ ಹೋಗಿದೆ
    ಕತೆಯಲ್ಲಷ್ಟೇ ಅಲ್ಲ ಜೀವನದಲ್ಲೂ ಪ್ರಾಮಾಣಿಕತೆ, ನೈತಿಕತೆಗಳನ್ನೆಲ್ಲ ಅಳವಡಿಸಿಕೊಂಡವರೇ ಹೆಚ್ಚಿದ್ದ ಭೂಮಿ
    ಕಾಯಕವೇ ಕೈಲಾಸವೆಂದು ತಿಳಿದವರ ಕರ್ಮ ಭೂಮಿ
    ತ್ಯಾಗದಿಂದಲೇ ಮೋಕ್ಷವೆಂದು ಘೋಷಿಸಿದ ತ್ಯಾಗಭೂಮಿಯೂ ಕೂಡ. ಈಗ ಅದನ್ನೆಲ್ಲ ತ್ಯಾಗ ಮಾಡಲಾಗಿದೆ
    ಜ್ಞಾನವೇ ಪುರುಷಾರ್ಥ ಸಾಧಕವೆಂದ ಜ್ಞಾನಿಗಳ ಬೀಡು
    ಪಾಪಿಗಳಿಗೂ ಬದುಕುವ ಸಮಾನ ಅವಕಾಶ ಕೊಟ್ಟ ಪುಣ್ಯಭೂಮಿ


-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com