ಇದಕ್ಕೆ ಸೈಲೆಂಟಾಗಿರಲು ಬರುವುದಿಲ್ಲ
ಗದ್ದಲದ ಬೀಜ
ಸದ್ದಿನ ಮೊಟ್ಟೆ
ಮೌನದ ದಾಯಾದಿ
ಅಕ್ಕರೆಯ ಬಿತ್ತರಿಸುವ ಅಕ್ಷರ
ಬದುಕಿಗೊಂದು ಹೊಸ ಬಣ್ಣ ಕೊಡುವ ವರ್ಣ
ಕಿವಿಯ ಸಾರ್ಥಕ್ಯ
ಅರ್ಥದ ಬೆನ್ನತ್ತುವ ಪ್ರಿಯಕರ
ಅರ್ಥ ಗೊತ್ತಿಲ್ಲದೇ ಪ್ರಯೋಗಿಸಿದರೆ ಅನರ್ಥ ಗ್ಯಾರಂಟಿ
ಭಾಷೆಯ ಮೂಲಧಾತು
ವಾಕ್ಯದ ಅಂಗಾಂಗ
ಸರಸ್ವತಿಯ ಹಾರದ ಮಣಿಗಳು
ಮಾತಿನ ಮಾಧ್ಯಮ ಮತ್ತು ಉತ್ಪನ್ನ
ಹೊಗಳಲು ನಮಗೆ ಶಬ್ದವೇ ಸಿಗುವುದಿಲ್ಲ. ಬೈಯ್ಯುವಾಗ ಮಾತ್ರ ಶಬ್ದಗಳು ನಿಲ್ಲುವುದೇ ಇಲ್ಲ
ಶಬ್ದ ಶಬ್ದ ಸೇರಿ ಅಬ್ದಿಯಾಯಿತು
ಶಬ್ದವೇ ಇಲ್ಲದಿದ್ದರೆ ಭಾಷಣಗಳೂ ಇರುತ್ತಿರಲಿಲ್ಲ
ಶಬ್ದವೇ ಇಲ್ಲದಿದ್ದರೆ ನವ್ಯ ಕವಿತೆಗಳೂ ಇರುತ್ತಿರಲಿಲ್ಲ
ಅಷ್ಟೇಕೆ ಹೆಂಡತಿಯ/ ಬಾಸ್ನ ಬೈಗುಳಗಳೂ ಇರುತ್ತಿರಲಿಲ್ಲ
ಶಬ್ದವು ತುಂಬಾ ಶಬ್ದ ಮಾಡಿದರೆ ಅದುವೇ ಗದ್ದಲ
ಶಬ್ದಕೋಶಗಳಲ್ಲಿನ ಪ್ರಧಾನ ಸಾಹಿತ್ಯ ಭಾಗ
ಶಬ್ದಗಳ ಜಾಡು ಹಿಡಿದು ಹೊರಡುವ ಭಾಷಾ ಶಾಸ್ತ್ರವನ್ನೂ ಶಬ್ದವೇಧಿ ಎಂದು ಕರೆಯಬಹುದು.
-ವಿಶ್ವನಾಥ ಸುಂಕಸಾಳ
vishwasunkasal@yahoo.com
Advertisement