ಕತ್ತಲು
ಬೆಳಕಿನ ಮೂಲ
ಬತ್ತಲಾಗಲು ಕತ್ತಲು ಬೇಕು
ಬೆಳಕು ಏರಲಾಗದ ಏಕೈಕ ಸ್ಥಿತಿ
ಬೆಳಕೆಂದರೆ ಗದ್ದಲ, ಕತ್ತಲೆಂದರೆ ನಿಶ್ಚಲ
ಬೆಳಕು ಜ್ಞಾನವೆಂದಾದರೆ ಕತ್ತಲು ಜ್ಞಾನಾವಸ್ಥೆಯ ಮೆಟ್ಟಿಲು
ಬೆಳಕು ಕಣ್ಣು ಕುಕ್ಕುತ್ತದೆ. ಕತ್ತಲು ಕಣ್ಣು ತೆರೆಯಲು ಸಹಕರಿಸುತ್ತದೆ
ದೀಪ ಹಚ್ಚಬೇಕೆಂದರೆ ಕತ್ತಲೆ ಬೇಕು ಬೆಳಕಲ್ಲ
ಬೆಳಕೆಂದರೆ ಹುಚ್ಚು ಓಟ. ಕತ್ತಲು ವಿರಾಮದ ಕೂಟ
ಬೆಳಕೆಂದರೆ ಜಾಗೃತಿ, ಕತ್ತಲೆಂದರೆ ಮುಗ್ಧತೆ
ಬೆಳಕೆಂದರೆ ಹಬ್ಬ. ಕತ್ತಲು ಹಬ್ಬಕ್ಕೊಂದು ನೆವ
ಕತ್ತಲೆಂದರೆ ಶಮನ. ಬೆಳಕು ಅಶಾಂತಿಯ ವಮನ
ಬೆಳಕೆಂದರೆ ಕಾಂತಿ. ಆದರೆ ಕತ್ತಲೆಂದರೆ ಶಾಂತಿ
ಬೆಳಕೆಂದರೆ ಪರ. ಕತ್ತಲೆಂದರೆ ಇಹ ಮತ್ತು ಅಪರ
ಬೆಳಕಿನಲ್ಲಿ 'ಅರ್ಥ'. ಕತ್ತಲಲ್ಲಿ 'ಕಾಮ' ಅದೂ ಒಂದು ಪುರಷಾರ್ಥ
ಮುಕ್ತಿಗೆ ಬೆಳಕು ಸಾಕು. ಆಸಕ್ತಿಗೆ ಕತ್ತಲು ಬೇಕು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Advertisement