ಎಲ್ಲ ಸಿನಿಮಾಗಳಲ್ಲಿನ ರೋಮಾಂಚಕ ದೃಶ್ಯ
ನಿತ್ಯ ಸ್ನಾನ ಮಾಡಿದರೂ ಕೆಲವೊಮ್ಮೆ ಮೈಯ್ಯೆಲ್ಲ ತುರಿಸುವುದರಿಂದ ವಾರಕ್ಕೊಮ್ಮೆ ಸ್ನಾನ ಮಾಡಿ ನೀರು ಉಳಿಸುವುದೇ ಲೇಸು
ದೇಹದ ಕೊಳಕನ್ನೆಲ್ಲ ತೊಳೆಯುವ ಜಳಕ
ಚಳಿಗಾಲದ ಬಿಸಿನೀರಿನ ಜಳಕ; ಮೈಯ್ಯೆಲ್ಲಾ ಪುಳಕ
ತಣ್ಣೀರಿನ ಜಳಕ ಮೈಯ್ಯೆಲ್ಲಾ ನಡುಕ
ಕೆಲವರ ಗಾಯನ ಪ್ರತಿಭೆಯನ್ನು ಜಾಗೃತಗೊಳಿಸುವ ಕ್ರಿಯೆ
ಜನರನ್ನೆಲ್ಲ ಒದ್ದೆಯಾಗಿಸುವ ಮಜ್ಜನ
ಸ್ನಾನ ಮಾಡದಿದ್ದರೆ ಅಲರ್ಜಿಗಳು ಉಂಟಾಗುವುದು
ಕೆಲವರಿಗೆ ಸ್ನಾನವೇ ಅಲರ್ಜಿ
ಪ್ರಿಯತಮೆ ದೂರ ಸರಿಯಬಾರದೆಂದರೆ ನಿತ್ಯ ಸ್ನಾನ ಮಾಡಬೇಕು
ನೀರು ಬೇಕಾದಷ್ಟಿದ್ದರೆ ಅಭಿಷೇಕ. ಕಡಿಮೆಯಿದ್ದರೆ ಪ್ರೋಕ್ಷಣೆ
ಬಾತ್ ರೂಮ್ ಹೊಕ್ಕಾಗ ಎಲ್ಲರೂ ಬಾತುಕೋಳಿಗಳೇ
ದೇಹ ನಾರುವ ಮೊದಲು ನೀರು ಎರಚಿಕೊಳ್ಳುವುದುತ್ತಮ
ನಿತ್ಯ ಸ್ನಾನ ಮಾಡಿದರೆ ವಾಸನೆ ಅಳಿಸಬಹುದು. ವಾರಕ್ಕೊಮ್ಮೆ ಸ್ನಾನ ಮಾಡುವುದರಿಂದ ನೀರು ಉಳಿಸಬಹುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com