ಅಂಬರಕ್ಕೇ ತಾಕುವಂತೆ ಚಪ್ಪರವ ಹಾಕಿ ಮಾಡಲಾಗುವ ವಿಜೃಂಭಣೆಯ ಕಾರ್ಯಕ್ರಮ
ಮತ್ತೊಬ್ಬರ ಗಮನ ಸೆಳೆಯಲೆಂದು ಮಾಡಲಾಗುವ ಅನಗತ್ಯ ವೈಭವ
ಶ್ರೀಮಂತರ ಮದುವೆಗಳೆಲ್ಲ ನಡೆಯುವುದು ಇದೇ ಮಾದರಿಯಲ್ಲೇ
ಉಳ್ಳವರ ಶೋಕಿ ಮಾರ್ಗ
ಮಂತ್ರಕ್ಕಿಂತ ಉಗುಳೇ ಜಾಸ್ತಿ.
ಹೂರಣಕ್ಕಿಂತ ಸಿಪ್ಪೆಗೇ ಜಾಸ್ತಿ ಮಹತ್ವ ಕೊಡುವಿಕೆ
ಅರ್ಥಕ್ಕಿಂತ ಶಬ್ದವೇ ಜಾಸ್ತಿ ಶಬ್ದ ಮಾಡುವಿಕೆ
ದೀಪ ಹಚ್ಚುವ ಬದಲು ಪಟಾಕಿ ಹಚ್ಚುವಿಕೆ
ಸಿನಿಮಾ ಡಬ್ಬಾ ಆಗಿದ್ದರೂ ಪ್ರಚಾರ ಮಾತ್ರ ಡಬ್ಬಲ್
ಕುಣಿಯುವುದಕ್ಕೆ ಬರದಿದ್ದರೂ ಕಾಲಿಗೆ ಮಾತ್ರ ಗೆಜ್ಜೆ
ತನ್ನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಸಾಲ ಮಾಡಿಯಾದರೂ ಇತರರಿಗೆ ಸಂತರ್ಪಣೆ ಮಾಡುವುದು
ಆಡಂಬರದ ಭಕ್ತಿ ಅದು ಮುಕ್ತಿಗಾಗಿ ಅಲ್ಲ. ತನ್ನ ಶಕ್ತಿ ಪ್ರದರ್ಶನಕ್ಕಾಗಿ ಅಷ್ಟೇ
ಆಡದೇ ಮಾಡುವ ಉತ್ತಮಿಕೆಯ ಬದಲು ಆಡಿದ್ದಕ್ಕಿಂತ ಅಧಿಕ ಮಾಡುವ ಅಧಿಕ ಪ್ರಸಂಗ
ಮಾಡಿದ್ದು ಮೂರುಕಾಸಿನ ಅಭಿವೃದ್ಧಿ ಕೆಲಸ. ಜಾಹೀರಾತು ಮಾತ್ರ ಸಾವಿರ ಕೋಟಿ
ಸೊಂಟಕ್ಕೆ ಉಡುದಾರವೇ ಇಲ್ಲದಿದ್ದರೂ ಕುತ್ತಿಗೆಗೆ ಕಾಸಿನ ಸರವೇ ತೊಡುವಿಕೆ
ವಿಶ್ವನಾಥ ಸುಂಕಸಾಳ
vishwasunkasal@yahoo.com