ಅಹಿಂಸೆ, ಸತ್ಯ, ಪ್ರಾಮಾಣಿಕತೆಗಳ ಸಮಾನಾರ್ಥಕ ಶಬ್ದ
ಭಾರತ ಮಾತಾ ಸುತರಿಗೆಲ್ಲ ಈ ತಾತ
ಆತ್ಮದ ವಿಸ್ತರಣೆಯ ಮೂಲಕ ಮಹಾನ್ ಆತ್ಮಾ ಆಗಿ ಮಹಾತ್ಮಾ ಆದವ...
ಸುತ್ತ ರಾವಣರೇ ಇದ್ದಾಗ್ಯೂ ರಾಮ ರಾಜ್ಯದ ಕನಸು ಬಿತ್ತಿದವ
ಉಳಿದವರೆಲ್ಲ ಬ್ರಿಟಿಷರ ಕೋಲೇ ಬಸವರಾಗಿದ್ದ ಸಮಯದಲ್ಲಿ ಕೈಯಲ್ಲಿ ಕೋಲು ಹಿಡಿದು ಬೆನ್ನತ್ತಿದವ
ಗಾದಿ ಬೇಡ ಎನ್ನುವ ಮೂಲಕ ನಿಸ್ವಾರ್ಥದ ಹಾದಿ ತೋರಿದವ
ಬ್ರಿಟಿಷರ ವಿರುದ್ಧದ ಹೋರಾಟ ಸಪ್ಪೆಯಾಗಿದ್ದಾಗ ಉಪ್ಪಿನ ಚಳವಳಿ ನಡೆಸಿದವ
ಪಂಚೆಯುಟ್ಟೇ ಆಂಗ್ಲರಿಗೆ ಪಂಚ್ ಕೊಟ್ಟು ಪ್ರಪಂಚದ ತುಂಬಾ ಪ್ರಸಿದ್ಧಿಯಾದವ
ಅಹಿಂಸೆಗೊಂದು ಪ್ರತಿಮೆಯೀತ. ಆದರೆ ಇವರ ಪ್ರತಿಮೆ ಮಾತ್ರ ನಿತ್ಯವೂ ಹಿಂಸೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com