ನಿಶ್ಶಬ್ದ

Updated on: 

ಮನಮೋಹನ ಮೋಡ್
    ಇದನ್ನು ಮೌನ ಮಾತ್ರ ಪರಿಪೂರ್ಣವಾಗಿ ವ್ಯಾಖ್ಯಾನಿಸಬಲ್ಲದು
    ಪ್ರಧಾನ ಮಂತ್ರಿಗಳ ಬಹು ಇಷ್ಟದ ಶಬ್ದ
    ಶ್ಶ್......ನಿಂದ ಶುರುವಾಗುವಂಥದ್ದು
    ಎಲ್ಲ ಕಡೆ ಸೈ ಎನಿಸಿಕೊಳ್ಳುವ ಸೈಲೆನ್ಸ್
    ಹೆಂಗಸರ ವಿರುದ್ಧ ಪದ
    ಅಧ್ಯಾಪಕರು ಪಾಠ ಮಾಡುವುದಕ್ಕಿಂತ ಹೆಚ್ಚು ಶ್ರಮವನ್ನು ತರಗತಿಯಲ್ಲಿ ನಿಶ್ಶಬ್ದ ಎಂದು ಕೂಗುವುದಕ್ಕೇವಿನಿಯೋಗಿಸುತ್ತಾರೆ
    ನಗರದಲ್ಲಿ ದುಡ್ಡು ಕೊಟ್ಟರೂ ಸಿಗದ ವಸ್ತುವೆಂದರೆ ಇದೊಂದೇ
    ಕಿವಿ ಮುಚ್ಚಿಕೊಂಡ ಮಾತ್ರಕ್ಕೆ ಇದು ಲಭಿಸುವುದಿಲ್ಲ, ಮನಸ್ಸೂ ನಿಶ್ಚಲವಾಗಬೇಕು
    ಎಲ್ಲ ಶಬ್ದಗಳ ಅಂತಿಮ ಗುರಿ ಇದನ್ನು ಸಾಧಿಸುವುದೇ
    ಪ್ರಾಜ್ಞನ ಪ್ರಾಡಕ್ಟ್
    ಅರ್ಥವಾಗುವಿಕೆ ಹೆಚ್ಚಿದಂತೆ ಶಬ್ದಾಡಂಬರ ಸಾಕೆನಿಸುತ್ತದೆ. ಆಗ ನಿಶ್ಶಬ್ದವೇ ಹೆಚ್ಚು ಪ್ರಿಯವಾಗುತ್ತದೆ
    ಸಾವಿರ ಶಬ್ದಗಳೂ ನಿಶ್ಶಬ್ದದಂತರಂಗವನ್ನು ಬಿಚ್ಚಿಡಲಾರವು
    ನಿಸ್ಸಂಗ ಗಳಿಸಿಕೊಂಡವನಿಗೆ ಒಲಿವ ಸ್ನೇಹಿತ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com