ಜಾಹೀರಾತಿಗೆ ಮಾಡೆಲ್ ಆಗಲು ಇರುವ ಕನಿಷ್ಠ ಅರ್ಹತೆಯ ಮಾಪಕ
ಖ್ಯಾತಿ ಸಿಗುವುದಾದರೆ ನಮ್ಮ ರಾಜಕಾರಣಿಗಳು ಯಾವ ಕೆಲಸಕ್ಕೂ ಹೇಸುವುದಿಲ್ಲ. ಒಳ್ಳೆಯ ಕೆಲಸಕ್ಕೂ...
ಖ್ಯಾತಿವೆತ್ತನ ಮಾತಿಗೆ ಕೋತಿಯೂ ಅಹುದಹುದೆನ್ನುವುದು
ಹೆಗಲಿಗೇರಿದರೆ ಖ್ಯಾತಿಯ ಶಾಲು, ಬೆನ್ನಿಗೆ ಬರುವುದು ಭಟ್ಟಂಗಿಗಳ ಸಾಲು.
ಪ್ರತಿಭೆಯೊಂದಿದ್ದರೆ ಇದು ಲಭಿಸುವುದಿಲ್ಲ. ಗಿಟ್ಟಿಸುವ ಜಾಣ್ಮೆಯೂ ಬೇಕು
ಕೆಲವು ಖ್ಯಾತನಾಮರ ಯಶಸ್ಸಿನ ಹಿಂದೆ ನಾಮದ ಬಲವೂ ಇದ್ದಿರುತ್ತದೆ
ಪ್ರಾಮಾಣಿಕ ಎಂಬ ಖ್ಯಾತಿ ಗಳಿಸಿದವನಿಗೆ ಹಣ ಗಳಿಸಲು ಆಗುವುದಿಲ್ಲ
ಪ್ರಖ್ಯಾತಿ ಬರುತ್ತದೆ ಹೋಗುತ್ತದೆ. ಆದರೆ, ಕುಖ್ಯಾತಿ ಬರುತ್ತದೆ ಹೋಗುವುದಿಲ್ಲ
ಜಾಣ್ಮೆ-ಕೌಶಲಖ್ಯಾತಿ
ಖ್ಯಾತಿ-ಖ್ಯಾತಿಶಾಲು, ಸನ್ಮಾನ
ಖ್ಯಾತಿ-ಜಾಣ್ಮೆಹಣ
ಖ್ಯಾತಿ-ಲಾಬಿಅವಾರ್ಡ್
ಖ್ಯಾತಿ-ಲಾಬಿಹಣಅಧಿಕಾರ
ಖ್ಯಾತಿ-ಜಾಣ್ಮೆ - ಹಣಹೆಣ
-ವಿಶ್ವನಾಥ ಸುಂಕಸಾಳ
vishwasunkasal@yahoo.com