ಭಕ್ಷಣೆ

Updated on: 

ಭಕ್ಷಣೆ
    ಕ್ಷಣ ಕ್ಷಣವೂ ಬಾಯಿ ಅಪೇಕ್ಷಿಸುವ ಭಕ್ಷೀಸು
    ಇದೊಂದೇ ಎಲ್ಲರನ್ನೂ ಜೀವಂತವಾಗಿಟ್ಟಿರುವುದು
    ತಿಂದು ತೇಗುವ ಪ್ರಕ್ರಿಯೆ
    ಕೆಲವರ ಜೀವನದ ಪರಮ ಲಕ್ಷ ಮತ್ತು ಲಕ್ಷಣವೇ ಭಕ್ಷಣೆ
    ತಿನ್ನಲು ಏನೂ ಸಿಗದಿದ್ದರೆ ಬೇರೆಯವರ ಜೀವವನ್ನಾದರೂ ತಿನ್ನುತ್ತಾರೆ ಕೆಲವರು
    ಚೆನ್ನಾಗಿ ದಕ್ಷಿಣೆ ಗಳಿಸುವವರಿಗೆ ಮೂರು ಹೊತ್ತೂ ಭಕ್ಷಣೆ ದೊರೆಯುವುದು
    ಭಿಕ್ಷೆಯ ಉದ್ದೇಶವೇ ಭಕ್ಷಣೆ
    ಜೀವ ರಕ್ಷಣೆಯ ಮೂಲ ಉಪಾಯ
    ತತ್ ಕ್ಷಣದ ಸ್ಪಂದನಕೆ ಭಕ್ಷಣವೇ ಉಪಾಯ
    ಬುಭುಕ್ಷಾ ಶಾಮಕ
    ಮಕ್ಕಳ ರೋದನ ತಡೆಯಲು ಇರುವ ಶೀಘ್ರ ಪರಿಹಾರಕವೇ ಈ ಖಾದನ
    ಮೇಜಿನ ಮೇಲೆ ತಿನ್ನುವುದು ಹೊಟ್ಟೆ ತುಂಬಿಸಲು. ಮೇಜಿನ ಕೆಳಗಡೆ ತಿನ್ನುವುದು ಕಿಸೆ ತುಂಬಿಸಲು
    ಭಕ್ಷ್ಯ ಭೋಜ್ಯಗಳೆಲ್ಲದರ ಪರಮ ಗುರಿ
    ಕೆಲವರಿಗೆ ತಲೆ ಭಾಗವೇ ಇಷ್ಟವಾಗುತ್ತದೆ ಭಕ್ಷಿಸಲು
    ಇಂದಿನ ಆಧುನಿಕ ಕಾಲದಲ್ಲಿ ಶಾಲೆಗೆ ಹೋಗುವುದರಿಂದ ದೊರೆಯುವ ದೊಡ್ಡ ಲಾಭ
    ಶಿಕ್ಷಣ ಮತ್ತು ಶಾಲೆಗಳ ಪರಮೋದ್ದೇಶ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com