ದುಡ್ಡು ಕೊಟ್ಟು ಹೊಟ್ಟೆ ಉರಿಸಿಕೊಳ್ಳುವುದು ಅಂದರೆ ಇದೇ
ನಿಶಾ ದೇವಿಯ ನಶಾರಾಧನೆ
ಗುಂಡು ಹಾಕಿಯೂ ಗುಂಡಿಗೆ ಬೀಳದೇ ಮನೆಗೆ ಬರುವುದಕ್ಕೆ ಗುಂಡಿಗೆ ಬೇಕು
ಗುಂಡು ಹೊಡೆಯುವುದು ಬೇರೆ, ಗುಂಡು ಹಾಕುವುದು ಬೇರೆ
ಕೆಲವರು ಗುಂಡು ಹಾಕದಿದ್ದರೂ ತೂರಾಡುತ್ತಾರೆ. ಅಂಥವರಿಗೆ ಗುಂಡು ಹಾಕಿಸಿದರೆ ತೂರಾಡುವುದು ನಿಲ್ಲುತ್ತದೆ
ಸೋಮವಾರದಿಂದ ಭಾನುವಾರದವರೆಗೆ ಪ್ರತಿರಾತ್ರಿ ಕುಡಿಯುವ ಸೋಮಪಾನ
ಇಪ್ಪತ್ತೊಂದನೆಯ ಶತಮಾನದ ನಾಗರಿಕ ಪೇಯ
ಇದನ್ನು ಹಾಕದಿದ್ದವನು 'ಘಾ' (ವೈಯೆನ್ಕೆ).
ದಿನದಿಂದ ದಿನಕ್ಕೆ ಸಮಾಜದಲ್ಲಿ ಗುಂಡಣ್ಣರು ಹೆಚ್ಚುತ್ತಿರುವುದು ಸರಕಾರದ ಬೊಕ್ಕಸಕ್ಕೆ ಒಳ್ಳೇದೇ ಅಂತೆ
ಊರಿಗೆ ಬಾರದಿದ್ದರೂ ಬಾರಿಗೆ ಬಾರದಿರನೇ?
ಗುರಿಯಿಟ್ಟು ಗುಂಡು ಹಾರಿಸಲೂ ಗುಂಡಿಗೆ ಬೇಕು
-ವಿಶ್ವನಾಥ ಸುಂಕಸಾಳ
vishwasunkasal@yahoo.com