ಖರ್ಚು ಮಾಡಿ ಕುರ್ಚಿ ಪಡೆಯುವ ಹಿಂದಿನ ಗುಟ್ಟು
ಸಿಗದಿದ್ದಾಗ ಇದು ಖಾರ
ಅಧಿಕಾರಿಗಳು ಸಾಮಾನ್ಯನ ಮೇಲೆ ಪ್ರದರ್ಶಿಸುವ ದೌಲತ್ತು
ಇದು ದೊರೆತರೆ ಕನ್ನಡಕ ಹಾಕಿಕೊಂಡರೂ ನೆಲ ಕಾಣುವುದಿಲ್ಲ
ರಾಜಕಾರಣಿಗಳ ಜೀವನದ ಪರಮೋನ್ನತ ಲಕ್ಷ್ಯ
ಒಮ್ಮೆ ಸಿಕ್ಕರೆ ಬಿಡಬೇಕೆನಿಸುವುದೇ ಇಲ್ಲ
ದುರ್ಬಳಕೆಗೇ ಹೆಚ್ಚು ವಿನಿಯೋಗವಾಗುವಂಥದ್ದು
ಕೆಲವರು ಮಾತ್ರ ಗಿಟ್ಟಿಸುವ ವಿಶೇಷ ಶಕ್ತಿ
ಮನುಷ್ಯನನ್ನು ಮಂಗನನ್ನಾಗಿಸುವ ಮತ್ತು ಮಂಗನನ್ನು ದೇವರನ್ನಾಗಿಸುವ ತಂತ್ರ
ಈ ಮಂತ್ರದಂಡವನ್ನು ಹಿಡಿದವನ ಹಿಂದೆ ಸಂಪತ್ತು, ಜನ ಎಲ್ಲ ಬರುವರು
ನಿಮ್ಮನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ, ನಿಮ್ಮ ಹೆಂಡತಿಯನ್ನು ಬಿಟ್ಟು
ನಿಮಗೆ ಪ್ರಶ್ನಿಸುವ ಅಧಿಕಾರವಿಲ್ಲ - ಹೆಂಡತಿಯ ವಿಷಯದಲ್ಲಿ
ಇದು ಪಂಚಮ ಪುರುಷಾರ್ಥ. ಹುಟ್ಟಿದವರೆಲ್ಲ ಗಿಟ್ಟಿಸಲು ಬಯಸುವಂಥದ್ದು
ಅಧಿಕಾರದಿಂದ ಸಮಾಜದಲ್ಲಿ ಬದಲಾವಣೆಯಾಗೋದು ಅಧಿಕಾರ ಪಡೆದವರ ಬ್ಯಾಂಕ್ ಅಕೌಂಟ್ನಲ್ಲಿ ಮಾತ್ರ
ಮನುಷ್ಯನಿಗೆ ಅದೃಶ್ಯದ ಕೊಂಬು, ಬಾಲವನ್ನು ಅಂಟಿಸುವ ರೋಗ
ವಿಶ್ವನಾಥ ಸುಂಕಸಾಳ
vishwasunkasal@yahoo.com