ಓಲೈಕೆ
ರಾಜಕೀಯ ಪಕ್ಷಗಳ ಮೂಲಮಂತ್ರ
ತನ್ನತ್ತ ವಾಲಿಸಿಕೊಳ್ಳುವಿಕೆ
ಬೊಗಳುವ ನಾಯಿಗೆ ಮೂಳೆ ತೋರಿಸುವುದು
ಕಡಿಮೆ ಸಂಖ್ಯೆಯಲ್ಲಿರುವವರಿಗೆ ಬಾಯಲ್ಲಿ ತುರುಕಿ ಬಹು ಸಂಖ್ಯೆಯವರಿಗೆ ತದುಕುವುದು
ಒಬ್ಬನಿಗೆ ನೈಸು, ಇನ್ನೊಬ್ಬನಿಗೆ ಐಸು
ಆಮಿಷ ತೋರಿಸಿ ವಿಷ ನೀಡುವ ಕ್ರಮ
ಲೈಕ್ ಮಾಡಲೆಂದು ಹೇಳುವ ಲೈ ಗಳು
ಓಲೆ ಬರೆದು ಒಲಿಸಿಕೊಳ್ಳುವಿಕೆ
ಗಡ್ಡ ಸವರಿ ಟೋಪಿ ಇಡುವಿಕೆ
ಇದೊಂಥರ ಮಂತ್ರವಿಲ್ಲದೇ ಮಾಡುವ ವಶೀಕರಣ
ಅದು ಕೊಡುತ್ತೇನೆ ಇದು ಕೊಡುತ್ತೇನೆ ಎಂದು ಹೇಳಿ ನಂತರ ಕೈ ಕೊಡುವಿಕೆ
ಓ ಎನ್ನುವಂತೆ ಮಾಡುವ ಕರೆ
ಮಡಿ
ಪೂಜಾ ವಸನ (ವಸ್ತ್ರ), ವಾಸನೆ ಬರುವಂತಿರುವುದೇ ಹೆಚ್ಚು
ಪ್ರಾಣಾಹುತಿ
ಜೀವಾರ್ಪಣೆ
ಒಂದು ನಿರ್ದಿಷ್ಟ ಉದ್ದೇಶಕ್ಕೆ ಪ್ರಾಣತೆರುವುದಕ್ಕೆ ಹೀಗೆನ್ನುತ್ತಾರೆ
ಮಡದಿಗಾಗಿ ಮಾಡಿಕೊಂಡ ಆತ್ಮಹತ್ಯೆ
ಕೊನೆಯ ಬಾರಿ ಉಸಿರನ್ನು ಎಳೆದುಕೊಳ್ಳುವುದು ಅಥವಾ ಉಸಿರು ಬಿಡುವುದು
ಮನೆಯ ಮಾಡು ಕುಸಿದುಬಿದ್ದು ಆದ ಅನಾಹುತದಲ್ಲಿ ಸಂಭವಿಸಿದ ಸಾವು
ಮಾಡಲಾಗದವನು ಮಡಿಯುತ್ತಾನೆ, ಆಗುವವನು ದುಡಿಯುತ್ತಾನೆ.
-ವಿಶ್ವನಾಥ ಸುಂಕಸಾಳ
vishwasunkasal@yahoo.com