ಉತ್ತಮ ಕೆಲಸಕ್ಕೆ ಉತ್ತಮ ಜನ ನೀಡುವ ಪ್ರೋತ್ಸಾಹ
ಉತ್ಸಾಹವರ್ಧಕ ಉತ್ತರ
ಉತ್ತಮ ಕಾರ್ಯವನ್ನು ಅತ್ಯುತ್ತಮವೆಂದು ಹೊಗಳುವಿಕೆ
ಫೇಸ್ಬುಕ್ ಭಾಷೆಯಲ್ಲಿ ಹೇಳುವುದಾದರೆ ಲೈಕ್ ಮಾಡುವಿಕೆ
ಬೆನ್ನು ತಟ್ಟಿ ಬಲ ಹೆಚ್ಚಿಸುವ ಬೆಂಬಲ
ಪುಕ್ಕಲನಿಗೂ ಧೈರ್ಯ ಒದಗಿಸುವ ಎನ್ಕ್ರೇಜ್ಮೆಂಟ್
ಗೆದ್ದವರಿಗೆ ಬಹುಮಾನ, ಸೋತವರಿಗೆ ಸಮಾಧಾನ
ಗೊಡ್ಡು ಬೆದರಿಕೆಗಳನ್ನೆಲ್ಲ ದೂರ ಮಾಡಿ ಗುಡ್ ಗುಡ್ ಎನ್ನುವಿಕೆ
ಹೆದಡಡರಬ್ಯಾಡ್ರಿ ಅಂತ ಗಂಡಗೆ ಧೈರ್ಯ ತುಂಬೋದು
ನಮ್ಮನ್ನು ಉದ್ದುದ್ದ ಕಾರ್ಯಕ್ಕೆ ತೊಡಗುವಂತೆ ಉದ್ದೀಪಿಸುವ ಅಂಶ
ಹಟದಿಂದ ನುಗ್ಗಿ ನಡೆಯಲು ಬೇಕಾದ ವಿಟಮಿನ್
ನಮ್ಮನ್ನು ನಾವೇ ಉತ್ತೇಜಿಸಿಕೊಳ್ಳಬೇಕು. ಹಾಗಂತ ಮತ್ತೇರಿಸಿಕೊಳ್ಳಬಾರದು
ದುಗುಡಗಳನ್ನೆಲ್ಲ ದೂರಮಾಡಿ ಗುರಿಯತ್ತ ದೂಡುವಿಕೆ
ನಾವು ಬೇರೆಯವರಿಗೆ ಮಾಡಬಹುದಾದ ಅತ್ತ್ಯುತ್ತಮ ಉಪಕಾರವೆಂದರೆ ಉತ್ತೇಜಿಸುವುದೇ
ವಾಹ್ ವಾಹ್...ಫೆಂಟಾಸ್ಟಿಕ್...ಸುಪರ್ಬ್...ಶಹಬ್ಬಾಸ್
ವಿಶ್ವನಾಥ ಸುಂಕಸಾಳ