ದೈನ್ಯತೆಯ ಮೂರ್ತ ರೂಪ.
ದಾನ ಪಡೆದು ದೈನೇಸಿ ಎಂದು ಬೈಸಿಕೊಳ್ಳುವ ಪರದೇಶಿ
ಇದು ಕೆಲವರ ಪಾರ್ಟ್ಟೈಂ ಉದ್ಯೋಗ
ಬಸ್ ಸ್ಟಾಂಡಿನ ಖಾಯಂ ಸದಸ್ಯ
ಕಂಡ ಕಂಡಲ್ಲಿ ತಲೆ ತಿನ್ನುವ ಶಿರೋ ಭಕ್ಷಕ
ಮಿತವ್ಯಯದ ಬುದ್ಧಿಯಿಲ್ಲದ ಹೆಂಡತಿಯ ಗಂಡನಾಗಿದ್ದರ ಪರಿಣಾಮ
ದುಡಿಯದೇ ತಿನ್ನುವವನೆಂಬ ಆರೋಪ ಹೊತ್ತವ
ಬೇಡವೆನ್ನುವುದು ಈತನ ಶಬ್ದಕೋಶದಲ್ಲಿಲ್ಲ. ಆದರೂ ಈತನನ್ನು ಬೇಡರವನು ಎನ್ನುತ್ತಾರೆ
ಬೇಡುತ್ತಾ ಬೇಡುತ್ತಾ ಕಂಡ ಕಂಡಲ್ಲಿ ಬೀಡು ಬಿಡುವವ
ಹೊಟ್ಟೆ ತೋರಿಸಿ ಹಿಟ್ಟು ಪಡೆವವ
ಮಕ್ಕಳಾದಷ್ಟೂ ಈತನ ಭಿಕ್ಷಾಪಾತ್ರೆ ತುಂಬುವುದು
ಮನುಷ್ಯ ಜನ್ಮದ ಅತ್ಯಂತ ಕೆಟ್ಟ ಅವಸ್ಥೆ
ಐದು ವರ್ಷಕ್ಕೊಮ್ಮೆ ನಮ್ಮ ರಾಜಕಾರಣಿಗಳು ತೊಡುವ ವೇಷ
ಭಿಕ್ಷೆ ಎತ್ತುವುದರಲ್ಲಿ ಈತನದು ಎತ್ತಿದ ಕೈ ಅಥವಾ ಚಾಚಿದ ಕೈ
ವಿಶ್ವನಾಥ ಸುಂಕಸಾಳ