ಕೆಲವು ಆಸಕ್ತಿಕರ (ಕಾಲ್ಪನಿಕ) ಫಲಕ ಸಾಹಿತ್ಯದ ಮುಂದುವರಿದ ಭಾಗ-
ಇಲ್ಲಿ ಸ್ವಾಮೀಜಿಗಳನ್ನು ತಯಾರು ಮಾಡಲಾಗುತ್ತದೆ. ಮಠಗಳು ಸಂಪರ್ಕಿಸಬಹುದು
ಎಸ್.ಎಸ್.ಎಲ್.ಸಿ.ಯಲ್ಲಿ ಫೇಲ್ ಆಗಿದ್ದೀರಾ? ಹಾಗಿದ್ದರೆ ನಿಮಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ. ನಮ್ಮಲ್ಲಿಗೆ ಬನ್ನಿ. ರಾಜಕಾರಣ ಹೇಳಿ ಕೊಡುತ್ತೇವೆ
ಈ ಬೈಕಿನ ಹಿಂದಿನ ಸೀಟಿನಲ್ಲಿ ಹುಡುಗಿ ಕುಳಿತಿದ್ದರೆ ಈ ನಂಬರ್ಗೆ ಕಾಲ್ ಮಾಡಿ
ದೇವಸ್ಥಾನದಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ದೇವರು ಎಲ್ಲೆಲ್ಲೂ ಇದ್ದಾನೆ
ಹಿಂದೆ ಮುಂದೆ ನೋಡದೇ ಒಂದೇ ಸಮನೆ ವಾಹನ ಚಾಲನೆ ಮಾಡಬೇಡಿ
ನಮ್ಮ ಸಂಸ್ಥೆಯಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುವುದಿಲ್ಲ
(ಮತ್ತೇಕೆ ಅವರನ್ನು ನೇಮಿಸಿಕೊಂಡದ್ದು)
ಜಗತ್ತೇ ಶಾಶ್ವತವಲ್ಲ. ನಮ್ಮ ಅಂಗಡಿಯ ಸಾಮಾನುಗಳೂ ಜಗತ್ತಿನಿಂದ ಹೊರತಲ್ಲ
ನಮ್ಮಲ್ಲಿ ಉಚಿತವಾಗಿ ದೊರೆಯುವುದು ಬಿಲ್ ಮಾತ್ರ
ಸಾಲ ಬೇಕಾಗಿದೆ. (ಉದ್ರಿ ಕೇಳಬೇಡಿ ಎಂಬ ಫಲಕದ ಬದಲು)
ರೈಲು ನಿಮಗೆ ಅಡ್ಡ ಬರುವುದಿಲ್ಲ, ನೀವು ರೈಲಿಗೆ ಅಡ್ಡಬರದಿದ್ದರೆ..
ಇಲ್ಲಿ ಪಿಕ್ ಪಾಕೆಟ್ ಕಳ್ಳರಿದ್ದಾರೆ. ಹಾಗಾಗಿ ನಿಮ್ಮ ಪಾಕೇಟ್ನಲ್ಲಿ ನಿಮ್ಮದೇ ಕೈ ಇರುವಂತೆ ನೋಡಿಕೊಳ್ಳಿ
ಮುಂದೆ ರಸ್ತೆ ಉಬ್ಬು ಇದೆ. ಎಚ್ಚರ ತಪ್ಪಿದರೆ ತಗ್ಗಿನಲ್ಲಿ ಬೀಳುವಿರಿ
ನಮ್ಮ ಮನೆ ನಾಯಿ ಬೊಗಳುವುದಿಲ್ಲ. ಎಚ್ಚರಿಕೆ..
ವಿಶ್ವನಾಥ ಸುಂಕಸಾಳ