ದಾರ / ಸೂಜಿ = ದರ್ಜಿ, ಲೋಪ ಸಂಧಿ
'ಜೀ ಹುಜೂರ್' ಎಂದು ಎಷ್ಟು ಸಲ ಹಾಜರಿ ಹಾಕಿದರೂ ಈತನ ಮನಸು ಕರಗುವುದೇ ಇಲ್ಲ
ಬೇರೆಯವರ ಬಟ್ಟೆಯ ಚೂರೇ ಬಡ ದರ್ಜಿಯ ಮಕ್ಕಳ ಬಟ್ಟೆ
ಉಳಿದೆಲ್ಲರಿಗೆ ಹೊಲಿದು ಕೊಟ್ಟರೂ ಈತನಿಗೆ ಮಾತ್ರ ಹರಿದ ಬಟ್ಟೆಯೇ ಗತಿ
ನಾವೆಲ್ಲ ಗರ್ವದಿಂದ ಕಾಲರ್ ಎತ್ತಲು ಇವನೇ ಕಾರಣ
ನಾವೆಷ್ಟು ತೆಳ್ಳಗಾಗಿದ್ದೇವೆ ಎಂಬುದನ್ನು ಪ್ರತಿಸಲ ಅಳೆವವ
ಇವನು ಬಟ್ಟೆ ಹೊಲಿದು ಕೊಡುತ್ತೇನೆಂದು ಹೇಳಿದ ದಿನವೇ ಹೋಗಿ ಕೇಳುವವನನ್ನು ಮುಗ್ಧ ಎನ್ನಬಹುದು
ಬಟ್ಟೆ ಹೊಲಿಯುವುದರಿಂದಲೇ ತಟ್ಟೆ ತುಂಬಿಸಿಕೊಳ್ಳುವವ
ಇವನು ಬಟ್ಟೆ ವಾಪಸ್ ಕೊಡುವ ತನಕ ನಿಮ್ಮ ಅಳತೆ ಬದಲಾಗುವ ಸಂಭವವೂ ಇರುತ್ತದೆ
ನಾಳೆ ಎನ್ನುವವನ ಮನೆ ಹಾಳು ಎಂಬ ಮಾತು ಇವನಿಗೆ ಅನ್ವಯಿಸುವುದಿಲ್ಲ
ನಮ್ಮ ಬಟ್ಟೆಗಳ ಕೊಯ್ದು ಹೊಲಿಯುವ ಆಪರೇಶನ್ ಮಾಡುವ ವೈದ್ಯ
ಹೊಲಿಗೆಯನ್ನು ಸುಲಿಗೆಗೆ ಬಳಸಿಕೊಂಡರೆ ಆತನ ಸೂಜಿಯೇ ಆತನಿಗೆ ಶೂಲವಾಗಿ ಇರಿಯುವುದು- ಜಾನ್. ಎಫ್. ಟೇಲರ್
ಎಲ್ಲರ ದೇಹಕ್ಕೆ ಸರಿಯಾಗಿ ಫಿಟ್ ಆಗುವ ಚರ್ಮದ ಅಂಗಿಯನ್ನು ಹೊಲೆದುಕೊಡುವ ದೇವರಂಥ ಪರಿಪೂರ್ಣ ದರ್ಜಿ ಇನ್ಯಾರು?