ಕನ್ನಡಿ

Updated on: 

ಕನ್ನಡಿ
    ಎಲ್ಲ ಹುಡುಗರ ಎರಡನೆಯ ಪ್ರೇಯಸಿ
    ಒಬ್ಬ ಹುಡುಗಿ ಸಿಕ್ಕ ಮೇಲೆ ಹುಡುಗನಿಗೆ ಇದರ ಮಹತ್ವದ ಅರಿವಾಗುತ್ತದೆ
    ನಮ್ಮ ಮುಖದ ಪ್ರತಿಬಿಂಬ ಮೂಡಿರುವಾಗ ಅದನ್ನು ಭೂತಗನ್ನಡಿ ಎನ್ನಬಹುದು
  ಕನ್ನಡಿಯಂಥ ಚೆಲುವೆಯನ್ನು ವರಿಸುವುದಿದ್ದರೆ ಏಛಟಿಜಟಜ ಢ್ಝಿಝಿ ್ಛಛ್ಠಜ ಎಂಬ ಶರತ್ತಿಗೆ ಒಳಪಡಬೇಕಾಗುತ್ತದೆ
    ಮನಸಿನಂಥ ಕನ್ನಡಿ ಮತ್ತೊಂದು ಬೇಕೇ?
    ಸೌಂದರ್ಯ ದೇವಿಯ ಬಲಗೈ ಆಭರಣ
    ರಸಿಕರ ಕಂಗಳ ಸೆಳೆಯುವ ನೋಟ ಇದರದ್ದು
    ಹೆಣ್ಣು ದೇವರ ಅದ್ಭುತ ಸೃಷ್ಟಿ. ಕನ್ನಡಿ ಮಾನವನ ಅದ್ಭುತ ಸೃಷ್ಟಿ
    ಕನ್ನಡಿಯೊಳಗಿನ ಜಗತ್ತು ಸತ್ಯವಾಗಿಯೂ ಮಿಥ್ಯಾ
    ಅಮಾಯಕರನ್ನು ಭ್ರಮೆಗೊಳಿಸುವ ಭ್ರಮಾಯಕ
    ಒಡೆದರೆ ಕೂಡಿಸಲಾಗದು ಹೆಣ್ಣಿನ ಮನಸಿನಂತೆ
    ಆತ್ಮದರ್ಶನೋಪಾಯ
    ಎರಡು ಕನ್ನಡಿಯಿದ್ದರೆ ನಿಮ್ಮ ಬೆನ್ನನ್ನು ನೀವೇ ನೋಡಿಕೊಳ್ಳಬಹುದು
    ಎಲ್ಲ ಭಾಷಣಕಾರರ ಮೊದಲ ಭಾಷಣದ ಮೊದಲ ಶ್ರೋತೃ
    ಎಲ್ಲ ಭಾಷೆಗಳಿಗಿಂತ ವಿಷಿಷ್ಟವಾದ ಕನ್ನಡಿ ಬಾಷೆಯೆಂಬುದೊಂದಿದೆ. ಆದರೆ ಅದು ಗಂಡಿಗೆ ಅರ್ಥವಾಗುವುದಿಲ್ಲ!

ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com