ಚೌಕಾಸಿ

Updated on: 

ಚೌಕಾಸಿ
    ಕಾಸಿನ ವಿಚಾರದಲ್ಲಿ ಮಾಡುವ ವಿಚಾರ
    ಜ್ಯೂಸು ಕುಡಿಯುವಾಗ ಮಾಡುವ ಕಂಜೂಸು
    ಆಧುನಿಕರ ಆಚಾರ ಈ ಲೆಕ್ಕಾಚಾರ
    ತರಕಾರಿಯವನ ಕಂಡ ಕೂಡಲೇ ಹೆಂಗಸರ ತಲೆಯಲ್ಲಿ ಜಾಗೃತವಾಗುವ ಬುದ್ಧಿ
    ಸ್ಟಾರ್ ಹೊಟೇಲ್, ಮಾಲ್ ಹೊಕ್ಕಾಗೆಲ್ಲ ಇದನ್ನು ಮಾಡಿದರೆ ಪ್ರೆಸ್ಟೀಜ್ ಹಾಳಾಗುತ್ತದೆ
    ಗಂಡಸರಲ್ಲಿ ಈ ಬುದ್ಧಿ ಕಡಿಮೆ ಇರುವುದರಿಂದ ಆತ ಮದುವೆಯಾಗಬೇಕು
    ಆಳಾಗಿ ದುಡಿದು ಉಣ್ಣುವಾಗಲೂ ಅಳುವ ಬುದ್ಧಿ
    ಅಗತ್ಯದ ಅರ್ಧ ಭಾಗವಷ್ಟೇ ಮಾಡಿದರೂ ಮಾಡಿದ್ದರಲ್ಲಿಯೂ ಅರ್ಧ ಉಳಿಸುವ ಹೆಚ್ಚುಗಾರಿಕೆ
    ಕಾಸಿಲ್ಲದವ ಚೌಕಾಸಿ ಮಾಡಲೇಬೇಕು. ಆದರೆ ಹೆಚ್ಚಿನ ಜನ ಕಾಸಿರುವವರೇ ಮಾಡುವವರು
    ಲಕ್ಷ್ಮಿಯನ್ನು ಮನೆಯಲ್ಲೇ ಬಂಧಿಸುವಿಕೆ
    ಒಳ ಹರಿವು ಹೆಚ್ಚು ಮಾಡಿ ಹೊರ ಹರಿವಿಗೆ ಅಣೆಕಟ್ಟು ನಿರ್ಮಿಸುವುದು
    ಸ್ಟಾಕ್ ಮೆಂಟಾಲಿಟಿ
    ಚೌಕಾಸಿ ಮಾಡುವವನ ಮನೆಯ ಕಸದಿಂದ ರಸ ತೆಗೆಯಲು ಸಾಧ್ಯವೇ ಇಲ್ಲ
    ಚೌಕಾಸಿ ಅತಿಯಾದರೆ ಬಿಕನಾಸಿಯೆಂದು ಬೈಸಿಕೊಳ್ಳುವಂತೆ ಮಾಡುವ ಬುದ್ಧಿ
    ಮನೆಗೆ ಬಂದವನಿಗೆ ಚಾ ಕೊಡದೇ ಕಳಿಸುವಿಕೆ
    ಕಿಸೆಯಿಂದ ಹಣ ತೆಗೆವಾಗ ಈ ಬುದ್ಧಿ ಕೈ ಜಗ್ಗುವುದರಿಂದ ಇದಕ್ಕೆ ಜುಗ್ಗತನ ಎನ್ನುತ್ತಾರೆ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com