ಗತಕಾಲದ ಇತಿಹಾಸ
ಕಳೆದುಹೋದ ಕ್ಷಣ
ಫಾಸ್ಟಾಗಿ ಕಳೆದುಹೋದ ಪಾಸ್ಟೆನ್ಸ್
ಕಳೆದು ಹೋದ ಮತ್ತು, ಕಳೆದುಕೊಂಡ ಮುತ್ತು
ಸೀಮೆಯಿಲ್ಲದ ಅನಂತ
ಭೂಗತ ಪಾತಕಿಗಳ ಮಿಸ್ಟರಿಗಳ ಹಿಸ್ಟರಿ
ನಮ್ಮ ಕಾಲದಲ್ಲಿ ಹಾಗಿತ್ತು ಹೀಗಿತ್ತು ಎಂದು ವರ್ಣಿಸುವವರ ನೆನಪು
ಪರಿವರ್ತನೆ
ಕಾಲುದಾರಿ ರಸ್ತೆಯಾಗಿ ಅದಕ್ಕೆ ಡಾಂಬರು ಬಳಿದು ಅದೀಗ ಕೆಸರು ಗದ್ದೆಯಾಗಿದ್ದು
ನಮ್ಮ ವರ್ತನೆ ಬೇರೆಯವರಲ್ಲಿ ಒಳ್ಳೆಯ ಪರಿವರ್ತನೆಗೆ ಕಾರಣವಾಗಬೇಕು
ಪರಿವರ್ತನೆಗಳೆಲ್ಲ ಒಳ್ಳೆಯ ವರ್ತನೆಗಳೆನ್ನಲಾಗುವುದಿಲ್ಲ, ಆದರೆ ಪರಿವರ್ತನೆ ಒಳ್ಳೆಯದೇ
ಪುರಾನಾ ಕಾಲದ ರೀತಿಯೆಲ್ಲ ಪುರ್ರಂತ ಬದಲಾಗುವಿಕೆ
ಜನರೇಷನ್ ಬದಲಾದಂತೆಲ್ಲ ಜನರೇಟ್ ಆಗೋ ಸಮಸ್ಯೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com