ನಂದ ಯಡಿಯೂರು, 9880055196
ನಿಮ್ಮ ಹೆಸರೇನೋ ಬಾಣಭಟ್ಟ. ನಿಮ್ಮ ತಮ್ಮನ ಹೆಸರು?
ಜಾಣಭಟ್ಟ!
ಐಗೂರು ರವಿಪ್ರಿಯ, ಕೊಡಗು, 9583111096
ಬೆಡಗಿಯೊಬ್ಬಳ ಹೃದಯದಲ್ಲಿ ಪ್ರೇಮದ ಟಿಕೆಟ್ ದೊರೆಯಲು ಏನು ಮಾಡಬೇಕು?
ಹೌಸ್ಫುಲ್ಲಾ ಖಾಲಿ ಇದ್ಯಾ ಅಂತ ಮೊದಲು ವಿಚಾರಿಸಿಕೊಳ್ಳಬೇಕು!
ಶ್ರೀಧರ್ ಡಿ. ರಾಮಚಂದ್ರ, ಚಿತ್ರದುರ್ಗ, 9880791106
ಭಾಗ್ಯ ಯೋಜನೆಗಳ ರೂವಾರಿ ಮುಖ್ಯಮಂತ್ರಿ ಸಿದ್ದುಗೆ ಲೋಕಸಭಾ ಚುನಾವಣೆಯಲ್ಲಿ ಭಾಗ್ಯ ಬಂದೀತೇ?
ಈಗ ಸದ್ಯ ಪ್ರಚಾರ ಭಾಗ್ಯವಂತೂ ಇದೆ.
ಎಂ.ಎಸ್. ಮಂಜರ್, ಬಂಡಳ್ಳಿ, ಕೊಳ್ಳೆಗಾಲ
ರಾಖಿ ಸಾವಂತ್ ಮೋದಿಗೆ ಕಿಸ್ ಕೊಟ್ಟರೆ?
ಅವರ ಹೆಸರಲ್ಲೇ ರಾಖಿ ಇರುವುದರಿಂದ ಇವರು ಕಿಸ್ ಕೊಟ್ಟರೂ ಅದು ತಂಗಿಯ ಮುತ್ತಾಗಿಬಿಡುತ್ತದೆ!
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಯೌವನಕ್ಕೂ ಮುಪ್ಪಿಗೂ ಇರುವ ವ್ಯತ್ಯಾಸವೇನು?
ಯೌವನದಲ್ಲಿ ಮುಲುಕು, ಮುಪ್ಪಿನಲ್ಲಿ ಬರೀ ಮೆಲುಕು!
ಬಾಣಭಟ್ಟ