ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಮುಂಬರುವ ಲೋಕಸಭಾ ಚುನಾವಣೆಗೆ ಭಯೋತ್ಪಾದಕರಿಗೂ ಟಿಕೆಟ್ ನೀಡಿದರೆ ಹೇಗೆ?
ಈಗಿರುವವರಾರೂ ಭಯ ಹುಟ್ಟಿಸುವವರಲ್ಲ ಎಂದಾಯಿತು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಒಂದೇ ಹುಡುಗಿಯನ್ನು ಪ್ರೀತಿಸುವ ಹುಡುಗರು ಸಿಗೋದು ಕಷ್ಟವಂತೆ?
ಪ್ರೀತಿಸಲು ಒಂದಾದರೂ ಹುಡುಗಿ ಸಿಕ್ಕರೆ ಸಾಕು ಎಂದು ಹೇಳುವ ಕಾಲ ದೂರವಿಲ್ಲ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಲ್ಯಾಪ್ಟಾಪ್ ಪ್ರೀತಿ ಫಲಿಸುತ್ತದೆಯೇ?
ತೊಡೆ(ಲ್ಯಾಪ್) ಮೇಲೆ (ಟಾಪ್) ಕುಳಿತ ಮೇಲೆ ಪ್ರೀತಿ ಫಲಿಸುವುದು ಗ್ಯಾರಂಟಿ!
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ವಿದ್ಯಾರ್ಥಿಯ ಜೀವನ ಬಂಗಾರದ ಜೀವನ ಅಂತಾರಲ್ಲ ಯಾಕೆ?
ಗೋಲ್ಡ್ ಮೆಡಲ್ ಕೊಡ್ತಾರಲ್ಲ ಅದ್ಕೆ ಇರ್ಬೇಕು!
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಸ್ವಿಸ್ ಬ್ಯಾಂಕಿನಲ್ಲಿ ಹಣ ತೊಡಗಿಸಿ, ಭಾರತ ಬಡರಾಷ್ಟ್ರ ಎನಿಸಿದೆಯಲ್ಲಾ?
ಅದನ್ನು ಬದಲಾಯಿಸಿ ಶ್ರೀಮಂತರಿರುವ ಬಡರಾಷ್ಟ್ರ ಎಂದು ಬದಲಾಯಿಸಲಾಗಿದೆ!
ಬಾಣಭಟ್ಟ