ಎಂ. ರವಿ, ಪರ್ಕಳ, 9731535863
ಅಂದು ರಾಮರಾಜ್ಯದಲ್ಲಿ ರಾಕ್ಷಸರು. ಇಂದು?
ಸಿದ್ದರಾಮನ ರಾಜ್ಯದಲ್ಲಿ ಬುದ್ಧಿಜೀವಿಗಳು!
ಶಂಕರನಾರಾಯಣ ಭಟ್, 9632821920
ಪ್ರತಿ ವಿಷಯದ 'ಮೊದಸಲ'ದ ಅನುಭವ ಥ್ರಿಲ್ ಆಗಿರುತ್ತಂತೆ ಹೌದಾ?
ಪ್ರತಿ ಬಾರಿಯೂ ಮೊದಲಬಾರಿಯ ಥ್ರಿಲ್ ಅನುಭವಿಸುವವನೇ ನಿಜ ಸುಖಿ!
ಆರ್.ಬಿ.ಸಿ. ಕೆ.ಎರ್.ನಗರ
ರಾಜಕಾರಣಿಗಳ ಅನಧಿಕೃತ ಪತ್ನಿಯರನ್ನು ಚುನಾವಣಾ ಆಯೋಗ ಅಧಿಕೃತಗೊಳಿಸಿದರೆ ಹೇಗೆ?
ಅನಧಿಕೃತ ಆಸ್ತಿಯ ಮಾಲೀಕರೂ ಅನಧಿಕೃತವಾಗೇ ಇರಬೇಕು!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಭಾರತದಲ್ಲಿ ಜಾತಿಗಳು ಇಲ್ಲದಿದ್ದರೆ ರಾಜಕಾರಣಿಗಳ ಗತಿ ಏನಾಗುತ್ತಿತ್ತು?
ಅವರು ನಿಜವಾಗಿಯೂ ಜಾತ್ಯತೀತರಾಗಿರುತ್ತಿದ್ದರು.
ಕೆ.ಜೆ. ರಾಮಪ್ರಸಾದ್, ಕಡೂರು
ರಾಮಾಯಣ, ಮಹಾಭಾರತದಂಥ ಪೌರಾಣಿಕ ಧಾರಾವಾಹಿಗಳಿಗಿಂತ ಮೆಗಾ ಧಾರಾವಾಹಿಗಳನ್ನೇ ಹೆಚ್ಚಾಗಿ ನೋಡುತ್ತಾರಲ್ಲಾ?
ಕೌಟುಂಬಿಕ ಮಾಹಾಭಾರತಕ್ಕಿಂತ ದೊಡ್ಡ ರಾಮಾಯಣ ಬೇರಿಲ್ಲ!