ತಡವಾದೀತೆಂಬ ಒತ್ತಡದಲ್ಲೇ ಕೆಲಸ ನಿರ್ವಹಿಸಬೇಕಾದ ಸುದ್ದಿಗಳ ಪ್ರಸವ ಕೋಣೆ
ಪ್ರತಿನಿತ್ಯ ಪತ್ರಕರ್ತರನ್ನು ಸಾಯಿಸುವ 'ಡೆಡ್ ಲೈನ್' ಭೂತ ಅವಿತಿರುವ ಗುಹೆ
ಭಾನುವಾರವೂ ರಜೆಯಿರದ ಏಕೈಕ ಕಾರ್ಯಶಾಲೆ
ಹೊರಗೆ ಸಂಜೆಯ ತಂಪೇರುತ್ತಿದ್ದಂತೆಲ್ಲಾ ಇಲ್ಲಿ 'ಕಾವು' ಹೊತ್ತಿಕೊಳ್ಳುತ್ತದೆ
ಸಿದ್ಧಾಂತಗಳ ರಾದ್ಧಾಂತದಲ್ಲಿ ಸಿಲುಕದಿರಲು ನಿರಂತರ ಸಂಗ್ರಾಮ ನಡೆಸುವ ಯುದ್ಧಶಾಲೆ
ಸುದ್ದಿಮನೆಯೊಳಗಾಗುವ ಸುದ್ದಿ ಹೊರಗಡೆ ಸದ್ದು ಮಾಡುವುದೇ ಇಲ್ಲ
ಸುದ್ದಿಯನ್ನು ಸುದ್ದಿ ಮಾಡುತ್ತಾ ಮಾಡುತ್ತಾ ಸ್ವತಃ ಸುದ್ದಿಯಾಗಲು ಇರುವ ಅವಕಾಶ
ಒಮ್ಮೆ ಇಲ್ಲಿ ಹೊಕ್ಕರೆ ಮುಗೀತು ಆಮೇಲೆ ಎಲ್ಲರ ವಿಷಯದಲ್ಲೂ ಮೂಗು ತೂರಿಸುವಿಕೆ ಪ್ರಾರಂಭ
ತಪ್ಪು ಒಪ್ಪುಗಳ ನಿರಂತರ ಚರ್ಚೆ ನಡೆಯುವ ಶುದ್ಧಿಮನೆಯೂ ಹೌದು
ಸುದ್ದಿವೀರರ ಅಂತರಂಗ ಕೋಣೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com