ಇದು ಉಪ ಅಲ್ಲ, ಪ್ರಧಾನ ಆಹಾರವೇ.
ದಾಕ್ಷಿಣಾತ್ಯರು ತೆಗೆದುಕೊಳ್ಳಲು ದಾಕ್ಷಿಣ್ಯ ಮಾಡಿಕೊಳ್ಳದ ವಿಷಯದಲ್ಲಿ ಇದೂ ಒಂದು
ಉತ್ತರಕ್ಕೆ ಹೋದರೆ ಬೆಳಗ್ಗೆ ಬೆಳಗ್ಗೆ ಕರಿದ ಬಜ್ಜಿ ಜಿಲೇಬಿಯಂಥ ತಿನಿಸೇ ಉಪಾಹಾರ
ಪೇಟೆಯ ಮಂದಿಗೆ ಬ್ರೆಡ್ ಜಾಮ್ಗಳೇ ಉಪಾಹಾರ. ಕಡಿಮೆ ಕೆಲಸ ಮಾಡುವವರಿಗೆ ಅದೇ ಸರಿ ಬಿಡಿ
ಕೆಲವರು ಗಾಳಿ ಬೆಳಕು ಇಲ್ಲದೆಯೂ ಬದುಕಬಲ್ಲರು. ಆದರೆ ಬೆಳಗಿನ ತಿಂಡಿ ಅದರಲ್ಲೂ ದೋಸೆ ಇಲ್ಲದೇ ಇರಲಾರರು
ಚಹಾ ಅಥವಾ ಕಾಫಿಯ ಸಂಗಡಿಗ
ಮುಖ್ಯ ಆಹಾರದ ನಡು ನಡುವೆ ತೆಗೆದುಕೊಳ್ಳುವ 'ಉಪ' ಆಹಾರ
ಹೆಂಡತಿ ತನ್ನ ಗಂಡನ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳುವ ಮಾಧ್ಯಮ
ಉಪ್ಪು ಹೆಚ್ಚು ಹಾಕಿದರೆ ಇದು ಉಪ್ ಆಹಾರ ತಿಂಡಲೀಕರ ತಿಂಡಿ
ಪೂರ್ಣ ಹಸಿವನ್ನು ನೀಗಿಸದಿದ್ದರೂ ಅರ್ಧ ಹಸಿವನ್ನು ಹೋಗಿಸುವಂಥದ್ದು
'ಉಪ'ವಾಸದ ದಿನ ಹೊಟ್ಟೆ ತುಂಬಾ ತಿನ್ನುವ 'ಆಹಾರ'
ವಿಶ್ವನಾಥ ಸುಂಕಸಾಳ